ದ್ವೇಷ, ಅಸೂಯೆ ತೊರೆಯಲು ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ಕರೆ
ದ್ವೇಷ, ಅಸೂಯೆ ತೊರೆಯಲು ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ಕರೆ
ಕೋಲಾರದ ಪತ್ರಕರ್ತರ ಭವನದಲ್ಲಿ ೪ನೇ ವರ್ಷದ ವಚನ ವೈಭವ, ವಚನ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಿದರು.


ಕೋಲಾರ, ೧೩ ಜುಲೈ (ಹಿ.ಸ) :

ಆ್ಯಂಕರ್ : ವಚನಗಳು ಸಮಾಜದಲ್ಲಿ ದ್ವೇಷ,ಅಸೂಯೆ,ಜಾತಿಯತೆಯ ಕತ್ತಲನ್ನು ತೊಡೆದು ಹಾಕಿ ಬೆಳಕು ತೋರುವ ಮುತ್ತು ರತ್ನಗಳಿಗಿಂತಲೂ ಅಮೂಲ್ಯವಾಗಿದೆ ಎಂದು ಶ್ರೀಮದ್ ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ಶ್ರೀ ಷ.ಬ್ರ.ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ಭಾನುವಾರ ಕೋಲಾರದಲ್ಲಿ ಸ್ವರ್ಣಭೂಮಿ ಫೌಂಡೇಷನ್, ರೋಟರಿ ಕ್ಲಬ್, ಸುಪ್ರೀಂ ಸೇವಾ ಸಂಸ್ಥೆ ಹಾಗೂ ವಿಜಯ ಉನ್ನತಿ ಸೇವಾ ಟ್ಟಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ೪ನೇ ವರ್ಷದ ವಚನ ವೈಭವ, ವಚನ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಾಚನ ನೀಡಿ ಮಾತನಾಡಿದರು.

೧೨ನೇ ಶತಮಾನದಲ್ಲಿ ಬಸವಣ್ಣನವರ ಸ್ಥಾಪಿಸಿದಂತ ಅನುಭವ ಮಂಟಪದಲ್ಲಿ ಸಾವಿರಾರು ವಚನಗಳನ್ನು ರಚಿಸಿದಂತ ಮೇಧಾವಿಗಳಿದ್ದರು. ವಚನಗಳು ವಾಚನ ಮಾಡುವುದು ಸುಲಭವಾದರೂ ಜೀವನದಲ್ಲಿ ಅಳವಡಿಸಿ ಕೊಂಡು ನಡೆದಾಗ ಮಾತ್ರ ಸಾರ್ಥಕವಾಗುತ್ತದೆ ಇಲ್ಲವಾದಲ್ಲಿ ವ್ಯರ್ಥದ ಜೀವನ ಎನಿಸಿ ಕೊಳ್ಳಲಿದೆ.`ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿ ಕೊಳ್ಳಿ ನೆರೆಮನೆಯ ದುಖಃಕ್ಕೆ ಅಳುವವರ ಮೆಚ್ಚ ಕೊಡಲ ಸಂಗಮದೇವ' ಎಂದು ಬಸವಣ್ಣನವರ ವಚನವನ್ನು ವಾಚಿಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು.

ಕಳಬೇಡಾ ಕೊಲಬೇಡಾ ಹುಸಿಯ ನುಡಿಯಲು ಬೇಡಾ,ಮುನಿಯ ಬೇಡಾ,ಅನ್ಯರಿಗೆ ಅಸಹ್ಯಪಡಬೇಡಾ ತನ್ನ ಬಣ್ಣಿಸ ಬೇಡಾ ಇದಿರ ಹಳಿಯಲು ಬೇಡಾ ಇದೇ ಅಂತರAಗ ಶುದ್ದಿ, ಇದೇ ಬಹಿರಂಗ ಶುದ್ದಿ,ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ ಎಂದ ಅವರು ಬಸವಣ್ಣನವರ ಸಪ್ತ ಸೂತ್ರಗಳನ್ನು ಪಾಲಿಸಿದರೆ ನಮ್ಮ ಬದುಕು ಸ್ವರ್ಗವಾಗುತ್ತದೆ. ಸಮಾಜ ಸೇವಕರನ್ನು, ವಿಕಲಚೇತನರನ್ನು, ಪ್ರತಿಭಾವಂತರನ್ನು, ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಇನ್ನಷ್ಟು ಪ್ರೇರಣೆ ನೀಡುವುದು ಉತ್ತಮ ಕೆಲಸವಾಗಿದೆ. ಸಮಾಜದ ಜಾಗೃತಿ ಕೆಲಸಗಳಿಗೆ ಶ್ರೀ ಮಠದ ಆಶೀರ್ವಾದ, ಪ್ರೋತ್ಸಾಹ ಸದಾಕಾಲ ಇರುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೊತ್ತರ ವಿಭಾಗದ ಸಂಯೋಜಕ ಡಾ.ಎಂ.ಮುನಿರಾಜು ಮಾತನಾಡಿ, ಮನುಷ್ಯನು ಮನುಷ್ಯತ್ವ ಮತ್ತು ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿ ಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂಬುವುದನ್ನು ವಚನಕಾರರು ಮಾರ್ಗದರ್ಶನ ನೀಡಿದ್ದಾರೆ.

ಶ್ರೀ ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿದ ಹಿರಿಯ ಪತ್ರಕರ್ತ ಕೆ.ಎಸ್. ಗಣೇಶ್ ಮಾತನಾಡಿ, ಇದೊಂದು ವಿಶಿಷ್ಟ ಅರ್ಥಪೂರ್ಣ ಮತ್ತು ಎಲ್ಲರೊಂದಿಗೆ ಬೆಸುಗೆ ಹಾಕುವಂತ ಕೌಟುಂಬಿಕ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ಚಿತ್ರದುರ್ಗದ ಲೇಖಕಿ ಗೀತಾ ಭರಮಸಾಗರ, ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ನಾಗನಂದ ಕೆಂಪರಾಜ್, ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ಬಿ.ಶಿವಕುಮಾರ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎಂ. ಚಂದ್ರಶೇಕರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಎ.ಎಂ. ಪ್ರಭಾಕರ್, ಕಾನೂನು ನೆರವು ಅಭಿರಕ್ಷಕ ಎಸ್.ಸತೀಶ್, ಸುರಕ್ಷಿತ್ ಗಾನ ಕಲಾ ವೇದಿಕೆ ಕಾರ್ಯದರ್ಶಿ ಸುಜಾತ ರಮೇಶ್, ಮುಳಬಾಗಿಲು ಸಾರ್ಕ್ ಸಂಸ್ಥೆ ಕಾರ್ಯದರ್ಶಿ ಪಿ. ಮೇಘರಾಜು, ಆನಂದ್ ಗ್ರೂಪ್ ಅಫ್ ಇನ್ಸಿಸ್ಟಿಟ್ಯೂಟ್ ಎಂ,ಡಿ, ಆನಂದರೆಡ್ಡಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ ಭಾಗವಹಿಸಿದ್ದರು.

ಬಸವ ಸೇವಾ ರತ್ನ ಪ್ರಶಸ್ತಿಗೆ ನಿವೃತ್ತ ಎ.ಎಸ್.ಐ. ಸಾಮಾಜಿಕ ಕಾರ್ಯಕರ್ತ ಕೆ.ಎನ್.ರವೀಂದ್ರ ನಾಥ್, ಸಾಹಿತಿ ವಿ.ಲಕ್ಷö್ಮಯ್ಯ, ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್, ಸಂಚಾರಿ ಕಲಾವಿದ ಎಸ್.ಎಫ್.ಹುಸೇನಿ, ಐ.ಸುನಿಲ್ ಕುಮಾರ್, ಕು.ನಮಿತಾಶ್ರೀ.ಜೆ.ಎನ್. ಎಂ.ಶAಕರ್, ಗಿರೀಶ್ ಎಂ.ಎಸ್. ವೈ.ವಿ. ಶ್ರೀನಿವಾಸಗೌಡ, ಎಂ.ಎಸ್.ಮAಜು. ಎಸ್.ಮಂಜುನಾಥ್, ಸವೂದ್ ಆಹಮದ್ ಕೋಲಾರಿ ಸೇರಿದಂತೆ ಅಧುನಿಕ ವಚನ ವಾಚಕರನ್ನು ಸನ್ಮಾನಿಸಲಾಯಿತು.

ಚಿತ್ರ ; ಕೋಲಾರದ ಪತ್ರಕರ್ತರ ಭವನದಲ್ಲಿ ೪ನೇ ವರ್ಷದ ವಚನ ವೈಭವ, ವಚನ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande