ಹಾಲು ಉತ್ಪಾದಕರ ಸಹಕಾರ ಸಂಘಗಳು ಮಾದರಿಯಾಗಿ ಕೆಲಸ ನಿರ್ವಹಿಸಲು ರಮೇಶ್ ಕರೆ
ಹಾಲು ಉತ್ಪಾದಕರ ಸಹಕಾರ ಸಂಘಗಳು ಮಾದರಿಯಾಗಿ ಕೆಲಸ ನರ‍್ವಹಿಸಲು ನರ‍್ದೇಶಕ ರಮೇಶ್ ಕರೆ
ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ನರ‍್ದೇಶಕ ಚಂಜಿಮಲೆ ರಮೇಶ್ ರವರನ್ನು ಸನ್ಮಾನಿಸಲಾಯಿತು.


ಕೋಲಾರ, ೧೩ ಜುಲೈ (ಹಿ.ಸ) :

ಆ್ಯಂಕರ್ : ತಾಲೂಕಿನ ವೇಮಗಲ್ ಮತ್ತು ಸುಗಟೂರು ಹಾಲು ಉತ್ಪಾದಕರ ಕ್ಷೇತ್ರದಿಂದ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಚಂಚಮಲೆ ಬಿ ರಮೇಶ್ ರವರನ್ನು ಜಂಬಾಪುರ ಹಾಲು ಉತ್ಪಾದಕ ಸಹಕಾರ ಸಂಘದಿಂದ ಸನ್ಮಾನಿಸಲಾಯಿತು.

ಚಂಜಿಮಲೆ ರಮೇಶ್ ಮಾತನಾಡಿ ಇಡೀ ಜಿಲ್ಲೆಯಲ್ಲಿಯೇ ವೇಮಗಲ್ ಮತ್ತು ಸುಗಟೂರು ಹೋಬಳಿಯ ಹಾಲು ಉತ್ಪಾದಕ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಡೇರಿಗೆ ಹಾಕುವುದರಿಂದ ನಿಮ್ಮ ಸಂಘಕ್ಕೆ ಮತ್ತು ಕೆಎಂಎಫ್ ಉತ್ತಮ ಲಾಭ ಬರುತ್ತದೆ ಇದರಿಂದ ಜಿಲ್ಲೆಯಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೋಲಾರ ಜಿಲ್ಲಾ ಕೆಎಂಎಫ್‌ಗೆ ಹೆಸರು ಬರುತ್ತದೆ ಎಂದರು

ಹಾಲು ಉತ್ಪಾದಕರಿಗೆ ರಾಸುಗಳಿಗೆ ಅನಾರೋಗ್ಯಕ್ಕೆ ತುತ್ತಾದಾಗ ಜೀವ ವಿಮೆ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ರ‍್ಥಿಕ ನೆರವು ಜೊತೆಗೆ ಹೊಸದಾಗಿ ಡೇರಿಗೆ ಹಾಲು ಹಾಕಲು ಡಿಸಿಸಿ ಬ್ಯಾಂಕ್ ಮತ್ತು ಸ್ಥಳೀಯ ಕೆನರಾ ಬ್ಯಾಂಕ್ ನಿಂದ ಸಹಾಯದ ನೆರವು ಕೊಡಿಸಲು ಪ್ರಯತ್ನಿಸುತ್ತೇನೆ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಮತ ನೀಡಿದ ಮತದಾರರಿಗೆ ಸದಾ ನಾನು ಚಿರಋಣಿಯಾಗಿರುತ್ತೇನೆ ಯಾವುದೇ ರೀತಿಯಲ್ಲಿ ನಿಮಗೆ ತೊಂದರೆಯಾದಾಗ ನನಗೆ ತಿಳಿಸಿ ನಾನು ಸಹಾಯ ಮಾಡುತ್ತೇನೆ ಗ್ರಾಮಸ್ಥರು ಮನವಿ ಮೇರೆಗೆ ನಿಮ್ಮ ಗ್ರಾಮದಲ್ಲಿ ದೇವಸ್ಥಾನಕ್ಕೆ ಮುಂದಿನ ದಿನಗಳಲ್ಲಿ ಸೀಟ್ ಅಳವಡಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು

ಕರ‍್ಯಕ್ರಮದಲ್ಲಿ ಕೋಲಾರ ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಜಂಬಾಪುರ ಎಂ ವೆಂಕಟರಾಮ್, ಜಂಬಾಪುರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ, ಮಾಜಿ ಅಧ್ಯಕ್ಷ ಶಾಮಣ್ಣ, ನರ‍್ದೇಶಕರಾದ ಡಿ ಮುನಿಯಪ್ಪ, ಶಿವಪ್ಪ, ಕೃಷ್ಣಪ್ಪ, ಪಿಳ್ಳಮ್ಮ, ಭಾಗ್ಯಮ್ಮ, ನಾಗರತ್ನಮ್ಮ, ಆನಂದಮ್ಮ, ಮುಖಂಡರಾದ ಅಶ್ಪತ್ ರೆಡ್ಡಿ, ಪಿ ನಾರಾಯಣಸ್ವಾಮಿ, ಆರು ವೆಂಕಟೇಶ್, ಗಾಣಿಗರ ಶಿವಪ್ಪ, ನರಸಿಂಹಪ್ಪ, ನಾಗೇಶ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಚಂಜಿಮಲೆ ರಮೇಶ್ ರವರನ್ನು ಸನ್ಮಾನಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande