ಹೆರಿಗೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿಯೇ ಮಾಡಿಸಿ : ಡಾ ಯಲ್ಲಾ ರಮೇಶಬಾಬು
ಕಂಪ್ಲಿ, 13 ಜುಲೈ (ಹಿ.ಸ.) : ಆ್ಯಂಕರ್ : ಹೆರಿಗೆಗಾಗಿ ಸುಸಜ್ಜಿತ ಹೆರಿಗೆ ಕೊಠಡಿ, ಬಿಸಿನೀರು ಸೌಲಭ್ಯ, ನುರಿತ ವೈದ್ಯರು ಹಾಗೂ ಸಿಬ್ಬಂದಿಯವರ ಸೇವೆ ಹಾಗೂ ಹೆರಿಗೆ ನಂತರ ಮಕ್ಕಳನ್ನು ಬೆಚ್ಚಗಿಡಲು ಬೆಬಿ ವಾರ್ಮರ್ ವ್ಯವಸ್ಥೆಯನ್ನು ಕರ್ನಾಟಕ ಸರಕಾರವು ಎಲ್ಲ ಅರೋಗ್ಯ ಕೇಂದ್ರಗಳಲ್ಲಿ ಕಲ್ಪಿಸಿದ್ದು ಸಾರ
ಹೆರಿಗೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿಯೇ ಮಾಡಿಸಿ : ಡಾ ಯಲ್ಲಾ ರಮೇಶಬಾಬು


ಹೆರಿಗೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿಯೇ ಮಾಡಿಸಿ : ಡಾ ಯಲ್ಲಾ ರಮೇಶಬಾಬು


ಹೆರಿಗೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿಯೇ ಮಾಡಿಸಿ : ಡಾ ಯಲ್ಲಾ ರಮೇಶಬಾಬು


ಕಂಪ್ಲಿ, 13 ಜುಲೈ (ಹಿ.ಸ.) :

ಆ್ಯಂಕರ್ : ಹೆರಿಗೆಗಾಗಿ ಸುಸಜ್ಜಿತ ಹೆರಿಗೆ ಕೊಠಡಿ, ಬಿಸಿನೀರು ಸೌಲಭ್ಯ, ನುರಿತ ವೈದ್ಯರು ಹಾಗೂ ಸಿಬ್ಬಂದಿಯವರ ಸೇವೆ ಹಾಗೂ ಹೆರಿಗೆ ನಂತರ ಮಕ್ಕಳನ್ನು ಬೆಚ್ಚಗಿಡಲು ಬೆಬಿ ವಾರ್ಮರ್ ವ್ಯವಸ್ಥೆಯನ್ನು ಕರ್ನಾಟಕ ಸರಕಾರವು ಎಲ್ಲ ಅರೋಗ್ಯ ಕೇಂದ್ರಗಳಲ್ಲಿ ಕಲ್ಪಿಸಿದ್ದು ಸಾರ್ವಜನಿಕರು ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಯಲ್ಲಾ ರಮೇಶಬಾಬು ವಿನಂತಿಸಿದ್ದಾರೆ.

ಕಂಪ್ಲಿ ತಾಲೂಕಿನ ಶ್ರೀರಾಮ ರಂಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಮಾತನಾಡುತ್ತ, ಒಂದು ಜೀವಕ್ಕೆ ಜನ್ಮ ನೀಡುವ ತಾಯ್ತನದ ಅತ್ಯಂತ ಮಹತ್ವದ ಘಟ್ಟವಾದ ಹೆರಿಗೆಯು ಸುರಕ್ಷಿತವಾಗಿರಲು ಸಹಕಾರಿಯಾಗಲು ಜಿಲ್ಲೆಯ ಎಲ್ಲ ಅರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ, ರಕ್ತದೊತ್ತಡ, ಹೆಚ್‌ಐವಿ, ಸಕ್ಕರೆ ಕಾಯಿಲೆ, ಮುಂತಾದವುಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಹೆರಿಗೆ ಸಂಧರ್ಭದಲ್ಲಿ ಉಂಟಾಗುವ ಅಪಾಯಕಾರಿ ಸನ್ನಿವೇಶಗಳನ್ನು ನಿವಾರಿಸಲು ವೈದ್ಯರ ಸಲಹೆ ಮೇರೆಗೆ ಗರ್ಭಿಣಿಯರ ಪರೀಕ್ಷೆ ಮಾಡಿಸುವ ಮೂಲಕ ಅಪಾಯಕಾರಿ ಚಿನ್ಹೆಗಳನ್ನು ಗುರ್ತಿಸಿ ಅಗತ್ಯ ಚಿಕಿತ್ಸೆ ಪಡೆಯುವಂತೆ ವಿನಂತಿಸಿದರು.

ಗರ್ಭಿಣಿ ಅವಧಿಯಲ್ಲಿ ಸಕ್ಕರೆ ಖಾಯಿಲೆ ಗುರ್ತಿಸಲು ಬೆಳಗಿನ ಅವಧಿಯಲ್ಲಿ ಉಪಹಾರ ಪೂರ್ವ ಸಕ್ಕರೆ ಖಾಯಿಲೆ ಪರೀಕ್ಷೆಗೆ ಎಲ್ಲ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇಸಿಜಿ ಮೆಷಿನ್‌ ವ್ಯವಸ್ಥೆ: ಹೃದಯ ಸಂಬಂಧಿತ ತೊಂದರೆಗಳನ್ನು ಗುರ್ತಿಸಲು ಪ್ರಾಥಮಿಕ, ಸಮುದಾಯ ಅರೋಗ್ಯ ಕೇಂದ್ರಗಳಲ್ಲಿ ಹಾಗೂ ತಾಲೂಕಾ ಆಸ್ಪತ್ರೆಗಳಲ್ಲಿ ಇಸಿಜಿ ಮಷೀನ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಸೆಲ್‌ ಕೌಂಟರ್‌: ರಕ್ತದಲ್ಲಿಯ ಬಿಳಿ ರಕ್ತಕಣಗಳು ಸಂಖ್ಯೆ, ಪ್ಲೇಟ್‌ಲೇಟ್ಸ್‌, ಹೆಚ್‌ಬಿ, ಗುರ್ತಿಸಲು ವ್ಯವಸ್ಥೆ ಮಾಡಲಾಗಿದೆ, ಅಲ್ಲದೆ ಎಫ್‌ಬಿಎಸ್‌, ಪಿಪಿಬಿಎಸ್‌, ಸಿಬಿಸಿ, ಪರೀಕ್ಷೆ ಮಾಡಲು ಹಾಗೂ ಇದರ ಸದುಪಯೋಗ ಪಡೆಯಲು ಸಮುದಾಯದಲ್ಲಿ ಮಾಹಿತಿಯನ್ನು ತಿಳಿಸಲು ವಿನಂತಿಸಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಭರತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌ ದಾಸಪ್ಪನವರ, ಸಿಹೆಚ್‌ಓ ಚನ್ನಮ್ಮ, ಶೂಶ್ರುಷಣಾಧಿಕಾರಿ ಮಂಗಳಗೌರಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande