ಬಳ್ಳಾರಿ, 11 ಜುಲೈ (ಹಿ.ಸ.) :
ಆ್ಯಂಕರ್ : ಹಿರಿಯ ನ್ಯಾಯವಾದಿಗಳು, ವಿಧಾನ ಪರಿಷತ್ತಿನ ಮಾಜಿ ಸದಸ್ಯರು, ವಿಧಾನ ಪರಿಷತ್ತಿನ ಸಭಾಧ್ಯಕ್ಷರು, ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರು, ಕರ್ನಾಟಕ ವಕೀಲರ ಪರಿಷತ್ತಿನ ಮಾಜಿ ಮಾಜಿ ಅಧ್ಯಕ್ಷರು, ಜನತಾದಳ (ಎಸ್)ನ ಮುಖಂಡರೂ ಆಗಿದ್ದ ಮುತ್ಸದ್ಧಿ ಎನ್. ತಿಪ್ಪಣ್ಣ (97) ಅವರು ಶುಕ್ರವಾರ ನಸುಕಿನಲ್ಲಿ ದೈವಾದೀನರಾಗಿದ್ದಾರೆ.
ವೀರಶೈವ ಸಮಾಜದ ದೊಡ್ಡ ಆಸ್ತಿ ಆಗಿದ್ದ ಎನ್. ತಿಪ್ಪಣ್ಣ ಅವರು, ಯುವ ವಕೀಲರಿಗೆ ಮಾರ್ಗದರ್ಶಕರಾಗಿ, ವೃತ್ತಿಯಲ್ಲಿ ಆದರ್ಶ - ವೃತ್ತಿಪರತೆ ಮತ್ತು ಬದ್ಧತೆಗಳನ್ನು ಹೊಂದುವ ಕುರಿತು ಸದಾಕಾಲ ಆದರ್ಶರಾಗಿದ್ದರು.
ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದ ಎನ್. ತಿಪ್ಪಣ್ಣ ಅವರ ಪಾರ್ಥಿವ ಶರೀರದ ದರ್ಶನಕ್ಕಾಗಿ ಬಳ್ಳಾರಿಯ ಸುಕೃತ ನರ್ಸಿಂಗ್ ಪಕ್ಕದ ಮನೆಯಲ್ಲಿ ಶನಿವಾರ ನಸುಕಿನ 6 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿದೆ.
ಮೃತರ ಅಂತಿಮ ಸಂಸ್ಕಾರವು ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಅವರ ಹುಟ್ಟೂರಾದ ಚಿತ್ರದುರ್ಗ ಜಿಲ್ಲೆಯ ತುರುವನೂರಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಗೆ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಿವರಗಳಿಗಾಗಿ ಎಲ್.ಟಿ. ಶೇಖರ್ - 94481 62792, ವಿಶ್ವ - 94484 44938 ಗೆ ಸಂಪರ್ಕ ಮಾಡಿರಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್