ಎನ್.ತಿಪ್ಪಣ್ಣ ನಿಧನಕ್ಕೆ ಬೊಮ್ಮಾಯಿ‌ ಸಂತಾಪ
ಬೆಂಗಳೂರು, 11 ಜುಲೈ (ಹಿ.ಸ.) : ಆ್ಯಂಕರ್ : ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಮಾಜಿ ಸಭಾಪತಿ ಆಗಿದ್ದ ಡಾ. ಎನ್. ತಿಪ್ಪಣ್ಣ ಅವರು ನಿಧನಕ್ಕೆ ಮಾಜಿ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ.. ಹಿರಿಯ ನ್ಯಾಯವ
ಎನ್.ತಿಪ್ಪಣ್ಣ ನಿಧನಕ್ಕೆ ಬೊಮ್ಮಾಯಿ‌ ಸಂತಾಪ


ಬೆಂಗಳೂರು, 11 ಜುಲೈ (ಹಿ.ಸ.) :

ಆ್ಯಂಕರ್ : ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಮಾಜಿ ಸಭಾಪತಿ ಆಗಿದ್ದ ಡಾ. ಎನ್. ತಿಪ್ಪಣ್ಣ ಅವರು ನಿಧನಕ್ಕೆ ಮಾಜಿ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ..

ಹಿರಿಯ ನ್ಯಾಯವಾದಿಯಾಗಿ, ಬಳ್ಳಾರಿ ವಿ. ವಿ ಸಂಘದ ಮಾಜಿ ಅಧ್ಯಕ್ಷರಾಗಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯದಕ್ಷರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ದೂರದೃಷ್ಠಿ ಉಳ್ಳವರಾಗಿದ್ದ ಅವರು ಬಳ್ಳಾರಿ ವಿ ವಿ ಸಂಘದ ಮೂಲಕ ಅನೇಕ ಶಾಲೆ ಕಾಲೇಜು ಪ್ರಾರಂಭಿಸಿ ಶಿಕ್ಷಣಾಭಿರುದ್ದಿಗೆ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ.

ಅವರ ಅಗಲಿಕೆಯಿಂದ ಸಮಾಜ ಹಿರಿಯ ಮಾರ್ಗದರ್ಶಕರನ್ನು ಕಳೆದುಕೊಂಡು ಬಡವಾದಂತಾಗಿದೆ. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗಕ್ಕೆ ನೀಡಲಿ, ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande