ಬಳ್ಳಾರಿ, 11 ಜುಲೈ (ಹಿ.ಸ.)
ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಗೆ ಬರುವ 11ಕೆವಿ ಫೀಡರ್ ನ ವಿದ್ಯುತ್ ವಿತರಣ ಕೇಂದ್ರದಿ0ದ ವಿದ್ಯುತ್ ಸರಬರಾಜಾಗುವ ಫೀಡರ್ ಎಫ್-09 ದ್ವಾರಕ ಆಸ್ಪತ್ರೆಯ ಹತ್ತಿರವಿರುವ ಪರಿವರ್ತಕದ ಬದಲಾವಣೆ ಕಾರ್ಯ ಮತ್ತು ಎಫ್-08 ಹೆಚ್‌ಟಿ ಮತ್ತು ಎಲ್‌ಟಿ ಕಂಬಗಳ ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುತ್ತಿರುವುರಿಂದ ನಾಳೆ ಬೆಳಿಗ್ಗೆ 11 ಗಂಟೆಯಿ0ದ ಸಂಜೆ 05 ಗಂಟೆಯವರೆಗೆ ನಗರದ ನಾನಾ ಕಡೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು :
ಎಫ್-09 ರ ನೆಹರು ಕಾಲೋನಿ, ಎಸ್.ಎನ್.ಪೇಟೆ 1ನೇ, 2ನೇ, 4ನೇ, 5ನೇ ಮತ್ತು 6ನೇ ಅಡ್ಡರಸ್ತೆ, ಶಂಕರ್ ಕಾಲೋನಿ, ಡಿಎಅರ್‌ಗ್ರೌಂಡ್, ಕೂಲ್‌ಕಾರ್ನರ್, ಡಬಲ್ ರಸ್ತೆ, ಕೋಲಾಚಲಂ ಕಾಂಪೌ0ಡ್, ರಾಯಲ್ ಸರ್ಕಲ್, ಗಾಂಧಿ ಭವನ, ಸಿಎಂಸಿ, ಅಂಬಲಿ ಬಾಗ್, ತಾಲ್ಲೂಕ್ ಅಫೀಸ್, ಡಿಸಿ ಅಫೀಸ್, ಸ್ಟೇಷನ್ ರೋಡ್.
ಎಫ್-08 ರ ಬಸವೇಶ್ವರ ನಗರ, ಎಂ.ಅರ್.ವಿ. ಲೇಔಟ್, ಸದ್ಗುರು ಕಾಲೋನಿ, ರೇಣುಕಾಚಾರ್ಯ ನಗರ, ಅಲ್ಲಂ ಲೇಔಟ್, ಬಿ.ಎಂ.ಎಸ್.ಲೇಔಟ್, ತಿರುಮಲ ಲೇಔಟ್, ಹರಿಪ್ರಿಯ ನಗರ, ಸುಷ್ಮಸ್ವರಾಜ್ ಕಾಲೋನಿ ಸೇರಿದಂತೆ ಇನ್ನೂ ಮುಂತಾದ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್