ಬಳ್ಳಾರಿ, 11 ಜುಲೈ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11ಕೆವಿ ಸೌತ್‌ವಿದ್ಯುತ್ ವಿತರಣ ಕೇಂದ್ರದಿ0ದ ವಿದ್ಯುತ್ ಸರಬರಾಜಾಗುವ ಫೀಡರ್‌ಗಳಾದ ಎಫ್-23, ಎಫ್-24, ಎಫ್-25, ಎಫ್-26, ಎಫ್-27, ಎಫ್-29, ಎಫ್-43, ಎಫ್-47, ಮತ್ತು ಎಫ್-48 ರ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ನಾಳೆ ಬೆಳಿಗ್ಗೆ 10 ಗಂಟೆಯಿ0ದ ಸಂಜೆ 05 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ನಗರದ ಬಂಡಿಮೋಟ್, ಬಾಪೂಜಿ ನಗರ, ಕುರಿಕಮೇಲ, ಕಮೇಲ ರಸ್ತೆ, ಆರ್.ಕೆ ಮಿಲ್ ರೋಡ್, ಬಾಪೂಜಿ ನಗರ, ಬಾಪೂಜಿ ನಗರ ಸರ್ಕಲ್, ರಾಣಿತೋಟ, ಕಣೆಕಲ್ ಬಸ್‌ಸ್ಟಾö್ಯಂಡ್, ಮಾರ್ಕೆಟ್, ಟೋಪಿಗಲ್ಲಿ, ಮರಿಸ್ವಾಮಿ ಮಠ, ಅಂದ್ರಾಳ್ ರಸ್ತೆ, ಕೊಲ್ಮಿ ಚೌಕ್, ಮಿಲ್ಲರ ಪೇಟೆ, ಅಂಧ್ರಾಳ್, ಮೋತಿ ವೃತ್ತ, ತೇರು ಬೀದಿ, ಜೈನ್ ಮಾರ್ಕೆಟ್, ಕಾಳಮ್ಮ ಸ್ಟಿಟ್, ಲಾರಿ ಟರ್ಮಿನಲ್, ರಂಗ ಮಂದಿರ, ಹೊಸ ಬಸ್ ನಿಲ್ದಾಣ, ಬಂಡಿಮೊಟ್, ಗೊಲ್ಲರಹಟ್ಟಿ, ಮಾರುತಿ ಕಾಲೋನಿ, ಅಂಧ್ರಾಳ್ ಸಿಟಿ, ಸಿದ್ದಾಪುರ ರೋಡ್ ಇಂಡಸ್ಟಿçಯಲ್, ಎನ್.ಜೆ.ವೈ ಮಿಂಚೇರಿ, ಚರ‍್ಕುಂಟ, ಮಹೇಶ್ ಪೈಪ್ಸ್ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್