ಸಂಡೂರು, 10 ಜುಲೈ (ಹಿ.ಸ.) :
ಆ್ಯಂಕರ್ : ಸಂಡೂರು, ಜುಲೈ 10, 2025: 33/11 ಕೆ.ವಿ ಸಂಡೂರು ಮತ್ತು 66/11 ಕೆ.ವಿ ಚೋರನೂರು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ 11ಕೆ.ವಿ ಮತ್ತು ಎಲ್‌ಟಿ ವಿದ್ಯುತ್ ಮಾರ್ಗಗಳ ಬದಲಾವಣೆ ಕಾಮಗಾರಿ ಕೈಗೊಂಡಿರುವುದರಿಂದ ಜುಲೈ 12 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಂಡೂರು ಪಟ್ಟಣ ಸೇರಿದಂತೆ ಕೃಷ್ಣನಗರ, ಸುಶೀಲಾನಗರ ಗ್ರಾಮಪಂಚಾಯಿತಿಯ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಎನ್‌ಜೆವೈ ಮತ್ತು ಐಪಿಸೆಟ್ ಹಾಗೂ ಯಶವಂತನಗರ ಮತ್ತು ದೇವಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಐಪಿಸೆಟ್ ಗ್ರಾಹಕರಿಗೆ. ಯಶವಂತನಗರ, ನಡಗುರ್ತಿ, ಬಂಡ್ರಿ, ಹೆಚ್ಕೆಹಳ್ಳಿ, ಸೋವೆನಹಳ್ಳಿ, ಅಗ್ರಹಾರ, ಕಾಳಿಂಗೇರಿ, ಚೋರನೂರು, ಬೊಮ್ಮಗಟ್ಟ, ಯರ್ರೆಯ್ಯನಹಳ್ಳಿ ಮತ್ತು ಗೊಲ್ಲಲಿಂಗಮನಹಳ್ಳಿ ಈ ಎಲ್ಲಾ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಎನ್‌ಜೆವೈ ಮತ್ತು ಐ.ಪಿ.ಸೆಟ್ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಂಡೂರು ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕೆ.ಎ ಉಮೇಶಕುಮಾರ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್