ರಾಯಚೂರು, 10 ಜುಲೈ (ಹಿ.ಸ.) :
ಆ್ಯಂಕರ್ : ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದೇಶದ ಎಲ್ಲಾ ವಲಯಗಳಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗಾರ್ಹತೆ ಹಾಗೂ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಉದ್ಯೋಗ ಆಧರಿತ ಪ್ರೋತ್ಸಾಹಧನ (ಇಎಲ್‍ಐ) ಯೋಜನೆಗೆ ಅನುಮೋದನೆ ನೀಡಿದೆ ಎಂದು ರಾಯಚೂರು ವಿಭಾಗೀಯ ಇಪಿಎಫ್ ಪ್ರಾದೇಶಿಕ ಆಯುಕ್ತರಾದ ನೀರಜ್ ಕುಮಾರ್ ಪ್ರಸಾದ್ ಅವರು ಹೇಳಿದ್ದಾರೆ.
ಗುರುವಾರ ನಗರದ ಪ್ರಾದೇಶಿಕ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಉತ್ಪಾದನಾ ವಲಯದ ಮೇಲೆ ವಿಶೇಷ ಒತ್ತು ನೀಡುವಂತೆ ಈ ಯೋಜನೆಯನ್ನು ರೂಪಿಸಲಾಗಿದ್ದು, ಇದರಿಂದ ಉದ್ಯೋಗಾರ್ಹತೆಯು ಹೆಚ್ಚುವುದರ ಜೊತೆಗೆ ಮೂಲಕ ಇಪಿಎಫ್‍ಒ ನೇರವಾಗಿ ಹೊಸ ಉದ್ಯೋಗಿಗಳಿಗೆ ಹಾಗೂ ಉದ್ಯಮಿಗಳಿಗೆ ಹಣಕಾಸಿನ ನೆರವು ದೊರೆಯಲಿದೆ ಎಂದರು.
ಕೇಂದ್ರ ಸರ್ಕಾರವು 99,446 ಕೋಟಿ ರೂ. ವೆಚ್ಚದೊಂದಿಗೆ ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ಮುಂದಿನ ಎರಡು ವರ್ಷಗಳಲ್ಲಿ 3.5 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದರು. ಈ ಯೋಜನೆಯಡಿಯಲ್ಲಿ ಸುಮಾರು 1.92 ಕೋಟಿ ಹೊಸದಾಗಿ ಉದ್ಯೋಗಕ್ಕೆ ಪ್ರವೇಶಿಸುವವರು, ಅಂದರೆ ಇದೆ ಮೊದಲ ಬಾರಿಗೆ ನೋಂದಾಯಿಸಿ ಕೊಳ್ಳುವವರು ಲಾಭ ಪಡೆಯಲಿದ್ದಾರೆ. ಈ ಯೋಜನೆಯ ಪ್ರಯೋಜನಗಳು 2025ರ ಆಗಸ್ಟ್ 1ರಿಂದ 2027ರ ಜುಲೈ 31ರೊಳಗೆ ಹೊಸ ಉದ್ಯೋಗಗಳು ಸೃಷ್ಟಿಯಾದ ಸಂದರ್ಭ ಅನ್ವಯವಾಗಲಿವೆ ಎಂದು ಹೇಳಿದರು.
ಇದರಲ್ಲಿ ಎರಡು ಪ್ರಮುಖ ಭಾಗಗಳಿವೆ. ಮೊದಲ ಭಾಗದಲ್ಲಿ ಇಪಿಎಫ್‍ಒ ನೋಂದಾಯಿತ ಹೊಸ ಉದ್ಯೋಗಿಗಳಿಗೆ ಒಂದು ತಿಂಗಳ ವೇತನದಷ್ಟು 15,000 ಗರಿ ಮೊತ್ತವನ್ನು ಎರಡು ಹಂತಗಳಲ್ಲಿ ಪಾವತಿಸಲಾಗುವುದು. ಮೊದಲ ಕಂತು 6 ತಿಂಗಳ ಸೇವೆಯ ನಂತರ ಹಾಗೂ ಎರಡನೇ ಕಂತು 12 ತಿಂಗಳ ಸೇವೆಯ ನಂತರ ಹಣಕಾಸು ಸಾಂಸ್ಕøತಿಕ ಶಿಬಿರದಲ್ಲಿ ಭಾಗವಹಿಸಿದ ಬಳಿಕ ಪಾವತಿಸಲಾಗುತ್ತದೆ. ಈ ಹಣದ ಒಂದು ಭಾಗವನ್ನು ನಿಗದಿತ ಅವಧಿಗೆ ಉಳಿತಾಯ ಖಾತೆಯಲ್ಲಿ ಇರಿಸುವ ವ್ಯವಸ್ಥೆಯು ಕೂಡ ಕೈಗೊಳ್ಳಲಾಗಿದೆ. ಇದರಿಂದ ಉಳಿತಾಯದ ಚಟದ ಉತ್ತೇಜನ ದೊರೆಯಲಿದೆ ಎಂದರು.
ಯೋಜನೆಯ ಎರಡನೇ ಭಾಗದಲ್ಲಿ ಉದ್ಯಮಿಗಳು ಉದ್ಯೋಗದಾರರನ್ನು ಪೆÇ್ರೀತ್ಸಾಹ ನೀಡಲಾಗುವುದು. ಉದ್ಯಮಿಗಳು ಹೊಸ ಉದ್ಯೋಗಿಗಳನ್ನು ನೇಮಕ ಮಾಡಿದರೆ 1 ಲಕ್ಷದವರೆಗೆ ವೇತನ ಹೊಂದಿರುವ ಉದ್ಯೋಗಿಗಳ ಮೇಲೆ ಮಾಸಿಕ ಪ್ರೋತ್ಸಾಹಧನ ನೀಡಲಾಗುವುದು.
ಉದ್ಯೋಗಿಗಳ ವೇತನ 10,000 ರೂ.ವರೆಗೆ ಇದ್ದರೆ ತಿಂಗಳಿಗೆ 1,000ರೂ. 10,000–20,000 ರೂಪಾಯಿಗಳ ನಡುವೆ ಇದ್ದರೆ 2,000 ರೂ. ಹಾಗೂ 20,000–1 ಲಕ್ಷದವರೆಗೆ ಇದ್ದರೆ ತಿಂಗಳಿಗೆ 3,000 ರೂ ನೀಡಲಾಗುತ್ತದೆ. ಉದ್ಯಮಿಗಳು ಕನಿಷ್ಠ 6 ತಿಂಗಳು ನಿರಂತರವಾಗಿ ಈ ಉದ್ಯೋಗಿಗಳನ್ನು ಉದ್ಯೋಗದಲ್ಲಿಡಬೇಕು.
ಈ ತಯಾರಿಕಾ ವಲಯದಲ್ಲಿ ಈ ಪ್ರಯೋಜನವನ್ನು ಮೂರನೇ ಮತ್ತು ನಾಲ್ಕನೇ ವರ್ಷಗಳಿಗೂ ವಿಸ್ತರಿಸಲಾಗಿದೆ, ಮತ್ತು 50 ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳು ಕನಿಷ್ಠ 2 ಹಾಗೂ 50 ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಕನಿಷ್ಠ 5 ಹೊಸ ಉದ್ಯೋಗಿಗಳನ್ನು ನೇಮಿಸಬೇಕೆಂಬ ಷರತ್ತು ವಿಧಿಸಲಾಗಿದೆ ಎಂದರು.
ಅಂತಿಮವಾಗಿ, ಯೋಜನೆಯಡಿ ಹೊಸ ಉದ್ಯೋಗಿಗಳಿಗೆ ನೇರವಾಗಿ ಆಧಾರ್ ಬ್ರೀಡ್ಜ್ ಪೇಮೆಂಟ್‍ಟ್ ವ್ಯವಸ್ಥೆ ಮೂಲಕ ಡಿಬಿಟಿ (ನೇರ ಲಾಭ ಪಾವತಿ) ಮೂಲಕ ಹಣ ಪಾವತಿಸಲಾಗುವುದು. ಉದ್ಯಮಿಗಳಿಗೆ ಪಾನ್ ಅಂಕಿತ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುವುದರ ಮೂಲಕ ಯೋಜನೆಯ ಜಾರಿ ಸುಗಮವಾಗಲಿದೆ ಎಂದು ಹೇಳಿದರು.
ಈ ಯೋಜನೆಯು “ಪ್ರಧಾನಮಂತ್ರಿ ಘೋಷಿಸಿದ ಅಮೃತ ಕಾಲದ ಈ ಯೋಜನೆ ಮೂಲಕ ಯುವಕರಿಗೆ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಉಳಿತಾಯದ ಮನೋಭಾವನೆ ಬೆಳೆಯಲಿದ್ದು, ಉದ್ಯಮ ವಲಯವೂ ಹೊಸ ರೀತಿಯಲ್ಲಿ ಬಲಪಡಲಿದೆ” ಎಂದು ಹೇಳಿದರು. ಸಭೆಯಲ್ಲಿ ಲೆಕ್ಕಾಧಿಕಾರಿಗಳಾದ ಪಿ. ರಾಘವೇಂದ್ರ ರಾವ್ ಮತ್ತು ಮುಕೇಶ್ ತುಳಸಿರಾಮ್ ಅವರು ಯೋಜನೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಈ ಸಭೆಯಲ್ಲಿ ಲೆಕ್ಕಾಧಿಕಾರಿಗಳಾದ ಪಿ. ರಾಘವೇಂದ್ರ ರಾವ್ ಮತ್ತು ಮುಕೇಶ್ ತುಳಸಿರಾಮ್, ಇನ್ನಿತರರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್