ಆಂತರಿಕ ಭದ್ರತೆ ಕುಸಿತ : ಭಾಸ್ಕರ್ ರಾವ್ ಆಕ್ರೋಶ
ಗದಗ, 10 ಜುಲೈ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಭದ್ರತಾ ಚುರುಕುಗಳು ಶಿಥಿಲಗೊಂಡಿರುವ ಕುರಿತು ಗದಗನಲ್ಲಿಂದು ಮಾತನಾಡಿದ ಬಿಜೆಪಿ ಹಿರಿಯ ನಾಯಕ ಭಾಸ್ಕರ್ ರಾವ್, ರಾಜ್ಯ ಗೃಹ ಇಲಾಖೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. “ಗೃಹ ಇಲಾಖೆಗೆ ಲಕ್ವಾ ಹೊಡೆದಂತಾಗಿದೆ” ಎಂದು ವ್ಯಂಗ್ಯವಾಡಿದ ಅವರು, ಆಂತರಿಕ
ಪೋಟೋ


ಗದಗ, 10 ಜುಲೈ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಭದ್ರತಾ ಚುರುಕುಗಳು ಶಿಥಿಲಗೊಂಡಿರುವ ಕುರಿತು ಗದಗನಲ್ಲಿಂದು ಮಾತನಾಡಿದ ಬಿಜೆಪಿ ಹಿರಿಯ ನಾಯಕ ಭಾಸ್ಕರ್ ರಾವ್, ರಾಜ್ಯ ಗೃಹ ಇಲಾಖೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. “ಗೃಹ ಇಲಾಖೆಗೆ ಲಕ್ವಾ ಹೊಡೆದಂತಾಗಿದೆ” ಎಂದು ವ್ಯಂಗ್ಯವಾಡಿದ ಅವರು, ಆಂತರಿಕ ಭದ್ರತೆ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಭಾಸ್ಕರ್ ರಾವ್ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಪರಪ್ಪರ ಅಗ್ರಹಾರ ಜೈಲಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ದಾಳಿ ಹಿನ್ನೆಲೆಯಲ್ಲಿ, ಹಲವು ಅಧಿಕಾರಿಗಳು ಹಾಗೂ ಬಂಧಿತರ ಸಂಬಂಧಿಕರು ತನಿಖೆಗೆ ಒಳಗಾಗಿರುವುದನ್ನು ಉದಾಹರಿಸಿದರು. “ಭದ್ರತಾ ವ್ಯವಸ್ಥೆ ಎಷ್ಟು ಶಿಥಿಲಗೊಂಡಿದೆ ಎಂಬುದಕ್ಕೆ ಇದು ಬೆನ್ನೆಲುಬು ಉಡಿದ ಉದಾಹರಣೆ,” ಎಂದು ಅವರು ಹೇಳಿದರು.

“ಜೈಲಿನೊಳಗೆ ಭಯೋತ್ಪಾದಕರಿಗೆ ಸೌಲಭ್ಯ ಒದಗಿಸಿದ ಘಟನೆ ತೀವ್ರ ಗಂಭೀರವಾದದ್ದು. ಅಲ್ಲಿನ ಮಾನಸಿಕ ವೈದ್ಯರು, ಎಎಸ್‌ಐ ಅಧಿಕಾರಿಗಳು ಹಾಗೂ ಭಯೋತ್ಪಾದಕರ ತಾಯಿಯನ್ನೂ ಎನ್‌ಐಎ ವಶಕ್ಕೆ ತೆಗೆದುಕೊಂಡಿದೆ. ಇದು ಸರ್ಕಾರದ ವ್ಯವಸ್ಥೆಯಲ್ಲಿನ ಭೀಕರ ದೋಷವನ್ನು ಬಹಿರಂಗ ಪಡಿಸುತ್ತದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ, ಭಾಸ್ಕರ್ ರಾವ್ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸ್ಥಾಪಿಸಿದ ಇಂಟರ್ನಲ್ ಸೆಕ್ಯೂರಿಟಿ ಡಿವಿಜನ್ ಘಟಕವನ್ನು ಸ್ಮರಿಸಿದರು. “ಬೇಹುಗಾರಿಕೆ, ಗರುಡ ಪಡೆ, ಕರಾವಳಿ ಕಾವಲು ಸೇರಿದಂತೆ ಐದು ವಿಭಾಗಗಳಲ್ಲಿ ಕಾರ್ಯಚಟುವಟಿಕೆ ನಡೆಯುತ್ತಿತ್ತು. ಆದರೆ ಈ ಸರ್ಕಾರಕ್ಕೆ ಆ ರೀತಿಯ ನವೀನ ಮನೋಭಾವನೆ ಇಲ್ಲ,” ಎಂದರು.

ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ವಿರುದ್ಧ ಟೀಕೆ ಹಾಕುತ್ತಾ, “ಸುರಕ್ಷತೆ, ಕಾನೂನು ಸುವ್ಯವಸ್ಥೆ ಮತ್ತು ಜೈಲು ವ್ಯವಸ್ಥೆಯಲ್ಲಿ ಅವರು ವಿಫಲರಾಗಿದ್ದಾರೆ. ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ರಾಜೀನಾಮೆ ನೀಡಬೇಕು,” ಎಂದು ಒತ್ತಾಯಿಸಿದರು. ಸೆಲ್ ಫೋನ್ ಸಿಮ್ ಕಾರ್ಡ್ ವಿತರಣೆಯಲ್ಲಿ ಸುರಕ್ಷತೆ ಕೊರತೆ, ಕೆವೈಸಿ ನಿಯಮಗಳ ಉಲ್ಲಂಘನೆ ಮತ್ತು ಬ್ಯಾಂಕ್ ಅಕೌಂಟ್ ಮೂಲಕ ಹಣದ ಚಲಾವಣೆಯಂತಹ ಭದ್ರತಾ ದುರ್ಬಲತೆಗಳನ್ನೂ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande