ಗುರುಪೂರ್ಣಿಮೆ
ಹುಬ್ಬಳ್ಳಿ, 10 ಜುಲೈ (ಹಿ.ಸ.) : ಆ್ಯಂಕರ್ : ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯಂತ ಮಹತ್ವವಿದೆ. ಆಧ್ಯಾತ್ಮಿಕದಿಂದ ಶಿಕ್ಷಣದವರೆಗಿನ ಎಲ್ಲ ಕ್ಷೇತ್ರಗಳಲ್ಲಿ ಗುರುಗಳು ಮಾರ್ಗದರ್ಶಕರಾಗಿದ್ದಾರೆ. ಇಂತಹ ಗುರುಗಳ ಗೌರವಕ್ಕಾಗಿ ಆಚರಿಸುವ ವಿಶೇಷ ದಿನವೇ ಗುರುಪೂರ್ಣಿಮೆ. ಪೌರ್ಣಿಮೆಯ ದಿನ, ವ್ಯಾಸ ಪೂರ್
ಗುರು ಪೂರ್ಣಿಮಾ


ಹುಬ್ಬಳ್ಳಿ, 10 ಜುಲೈ (ಹಿ.ಸ.) :

ಆ್ಯಂಕರ್ : ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯಂತ ಮಹತ್ವವಿದೆ. ಆಧ್ಯಾತ್ಮಿಕದಿಂದ ಶಿಕ್ಷಣದವರೆಗಿನ ಎಲ್ಲ ಕ್ಷೇತ್ರಗಳಲ್ಲಿ ಗುರುಗಳು ಮಾರ್ಗದರ್ಶಕರಾಗಿದ್ದಾರೆ. ಇಂತಹ ಗುರುಗಳ ಗೌರವಕ್ಕಾಗಿ ಆಚರಿಸುವ ವಿಶೇಷ ದಿನವೇ ಗುರುಪೂರ್ಣಿಮೆ.

ಪೌರ್ಣಿಮೆಯ ದಿನ, ವ್ಯಾಸ ಪೂರ್ಣಿಮೆಯೆಂದು ಕೂಡ ಕರೆಯಲ್ಪಡುವ ಈ ದಿನವನ್ನು ವೇದವ್ಯಾಸರ ಜನ್ಮದಿನವನ್ನಾಗಿ ಹಾಗೂ ಗೀತಾ ಬೋಧನೆ ಮಾಡುವ ಮೊದಲ ಗುರುಗಳಾದ ಕೃಷ್ಣ ಪರಮಾತ್ಮನ ನೆನಪಿನ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಈ ದಿನ, ಶಿಷ್ಯರು ತಮ್ಮ ಗುರುಗಳಿಗೆ ಪುಷ್ಪಾರ್ಪಣೆ, ಪಾದಪೂಜೆ, ಹಾಗೂ ಕೃತಜ್ಞತೆಯ ಸಲ್ಲಿಕೆಯಿಂದ ಗೌರವ ಸಲ್ಲಿಸುತ್ತಾರೆ.

ಇಂದು ಶಾಲೆ-ಕಾಲೇಜುಗಳಿಂದ ಹಿಡಿದು ಅಧ್ಯಾತ್ಮಿಕ ಕೇಂದ್ರಗಳವರೆಗೆ ಎಲ್ಲೆಡೆ ಗುರುಗಳ ಸೇವೆಯು ಸ್ಮರಿಸಲಾಗುತ್ತಿದೆ. ಹಲವೆಡೆ ಕಾರ್ಯಕ್ರಮಗಳು, ಉಪನ್ಯಾಸಗಳು, ನಡೆಯುತ್ತವೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಸ್ಮರಣಿಕೆಗಳನ್ನೂ ನೀಡುತ್ತಾರೆ.

ಗುರುಪೂರ್ಣಿಮೆ ದಿನದ ಸಂಚಿಕೆಗಳಲ್ಲಿ ಗುರುಗಳ ಮಹತ್ವ, ಅವರ ಜೀವನ ದರ್ಶನ ಹಾಗೂ ಶ್ರದ್ಧಾ-ಭಕ್ತಿಯ ಸಂಕೇತವಾಗಿ ಈ ದಿನವನ್ನು ಗುರುತಿಸಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande