ಕೋಲಾರದಲ್ಲಿ ಸಂಭ್ರಮದ ಗುರುಪೂರ್ಣಿಮಾ ಆಚರಣೆ
ಕೋಲಾರದಲ್ಲಿ ಸಂಭ್ರಮದ ಗುರುಪೂರ್ಣಿಮಾ ಆಚರಣೆ
ಕೋಲಾರದ ಬಾಬಾ ಮಂದಿರದಲ್ಲಿ ಗುರುಪೂರ್ಣಿಮಾ ಅಂಗವಾಗಿ ವಿಶೇಷ ಪೂಜೆ ನಡೆದಿದ್ದು, ೨೫ ಸಾವಿರಕ್ಕೂ ಹೆಚ್ಚು ಮಂದಿಗೆ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಬ್ಬದೂಟದೊಂದಿಗೆ ಅನ್ನದಾಸೋಹ ನಡೆಸಿದರು.


ಕೋಲಾರ, ೧೦ ಜುಲೈ (ಹಿ.ಸ) :

ಆ್ಯಂಕರ್ : ಗುರು ಪೂರ್ಣಿಮಾ ಅಂಗವಾಗಿ ನಗರದ ಸಾಯಿಬಾಬಾ ಮಂದಿರದಲ್ಲಿ ಗುರುವಾರ ವಿಶೇಷ ಪೂಜೆ, ಅದ್ದೂರಿ ಹೂವಿನ ಅಲಂಕಾರ,ವಾದ್ಯಗೋಷ್ಠಿ ಏರ್ಪಡಿಸಲಾಗಿತ್ತು. ಬಾಬಾ ದರ್ಶನಕ್ಕೆ ಸುಮಾರು ೨೫ ಸಾವಿರಕ್ಕೂ ಮೀರಿದ ಭಕ್ತ ಸಾಗರ ಹರಿದು ಬಂದಿತ್ತು.

ಪ್ರತಿ ವರ್ಷದಂತೆ ಈ ವರ್ಷವೂ ನಗರದ ಬಾಬಾ ಮಂದಿರದಲ್ಲಿ ಮುಂಜಾನೆಯಿ0ದಲೇ ಗುರುವಿನ ಕೃಪೆ ಪಡೆಯಲು ಸಹಸ್ರಾರು ಮಂದಿ ಸರದಿ ಸಾಲಿನಲ್ಲಿ ನಿಂತಿದ್ದುದು ಕಂಡು ಬಂತು. ಬಾಬಾ ಮಂದಿರದಿ0ದ ರೈಲ್ವೆ ನಿಲ್ದಾಣದವರೆಗೂ ಜನರು ಸಾಲುಗಟ್ಟಿ ನಿಂತಿದ್ದರು. ಮುಂಜಾನೆಯ ಅಭಿಷೇಕ, ಗುರು ಭಜನೆಯೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭಗೊ0ಡಿದ್ದು, ಸಾಯಿಬಾಬಾ ಮೂರ್ತಿ ಹಾಗೂ ಇಡೀ ದೇವಾಲಯವನ್ನು ಲಕ್ಷಾಂತರ ಮೌಲ್ಯದ ವಿವಿಧ ರೀತಿಯ ಹೂಗಳಿಂದ ವಿಶಿಷ್ಟ ರೀತಿಯಲ್ಲಿ ಅಲಂಕಾರಗೊಳಿಸಲಾಗಿತ್ತು.

ಭಕ್ತರ ಅನುಕೂಲಕ್ಕಾಗಿ ಹಾಗೂ ದರ್ಶನಕ್ಕೆ ಬಂದ ಸಹಸ್ರಾರು ಮಂದಿಯನ್ನು ನಿಯಂತ್ರಿಸಲು ಮಂದಿರದ ಮುಂಭಾಗ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಭಕ್ತರು ಸರದಿ ಸಾಲಿನಲ್ಲಿ ಮುನ್ನಡೆಯಲು ಸಕಲ ವ್ಯವಸ್ಥೆ ಮಾಡಲಾಗಿತ್ತಾದರೂ, ಸರದಿ ಸಾಲು ರೈಲ್ವೆ ನಿಲ್ದಾಣದವರೆಗೂ ಸಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಗುರುವಿನ ದರ್ಶನ ಪಡೆದರು.

ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ದೇವಾಲಯದ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪೊಲೀಸರೊಂದಿಗೆ ೫೦ಕ್ಕೂ ಹೆಚ್ಚು ಮಂದಿ ಬಾಬಾ ಭಕ್ತರ ಸೇವಾದಳ ಕಾರ್ಯಕರ್ತರು ನಿರಂತರವಾಗಿ ಶ್ರಮಿಸಿದ್ದು, ಸರಾಗವಾಗಿ ದರ್ಶನ ವ್ಯವಸ್ಥೆ, ಬರುವ ಭಕ್ತಾಧಿಗಳಿಗೆ ವಿಭೂತಿ, ತೀರ್ಥ, ಪ್ರಸಾದ ನೀಡಿಕೆಯ ಉಸ್ತುವಾರಿಯನ್ನೂ ವಹಿಸಿದ್ದರು.

ಗುರು ಪೌರ್ಣಿಮಾ ಈ ಬಾರಿ ಅದ್ದೂರಿಯಾಗಿ ನಡೆದಿದ್ದು, ಬಾಬಾ ಮಂದಿರಕ್ಕೆ ಹತ್ತಿರವಿರುವ ನಗರದ ರೈಲು ನಿಲ್ದಾಣದ ಮುಂಭಾಗದ ಮೈದಾನದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರು ೨೫ ಸಾವಿರ ಮಂದಿಗೆ ಹಬ್ಬದೂಟದ ವ್ಯವಸ್ಥೆ ಕಲ್ಪಿಸಿದ್ದು, ತಾಲ್ಲೂಕಿನ ಮರ್ಜೇನಹಳ್ಳಿಯ ಎಂಜಿಎನ್ ಬ್ರರ‍್ಸ್ ಕ್ಯಾಟರಿಂಗ್ಸ್ನ ಪಿ.ಎಂ.ರಮೇಶ್, ಎಂ.ವನಿತಾ ತಂಡ ಇಡೀ ಊಟದ ವ್ಯವಸ್ಥೆ ನೇತೃತ್ವ ವಹಿಸಿದ್ದರು.

ಜತೆಗೆ ಬೆಳಗ್ಗೆ ೧೧-೩೦ ಗಂಟೆಯಿAದ ಸಂಜೆ ೪ ಗಂಟೆಯವರೆಗೂ ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೆ ರೈಲ್ವೆ ನಿಲ್ದಾಣದ ಮೈದಾನದಲ್ಲಿ ಹಾಕಿರುವ ಬೃಹತ್ ಶಾಮಿಯಾನಾದಡಿ ಹಬ್ಬದ ಊಟದ ಪ್ರಸಾದವನ್ನು ಬಫೆ ಮಾದರಿ ಬಡಿಸಿದ್ದು ೨೨೦ ಮಂದಿ ಬಾಣಸಿಗರು ಈ ಕಾರ್ಯದಲ್ಲಿ ಶ್ರಮಿಸಿದರು. ಭಕ್ತಾಧಿಗಳಿಗೆ ತಟ್ಟೆ ಇಡ್ಲಿ,ಚೆಟ್ನಿ, ತರಕಾರಿ ಪಲಾವ್, ಜಾಹಂಗೀರ್, ಈರುಳ್ಳಿ ಬೊಂಡಾ, ಅನ್ನಾ ತರಕಾರಿ ಸಾಂಬಾರ್‌ಅನ್ನು ಶುದ್ದ ಕುಡಿಯುವ ನೀರಿನ ಬಾಟೆಲ್‌ನೊಂದಿಗೆ ಅಡಿಕೆ ತಟ್ಟೆಯಲ್ಲಿ ಬಡಿಸಲಾಯಿತು.

ಬ್ಯಾಲಹಳ್ಳಿ ಗೋವಿಂದಗೌಡ ಮಾಧ್ಯಮದೊಂದಿಗೆ ಮಾತನಾಡಿ, ಕೋಮು ಸಾಮರಸ್ಯಕ್ಕಾಗಿ ಸಾಯಿಬಾಬಾ ಆದರ್ಶವಾಗಿದ್ದು, ದೇಶದಲ್ಲಿ ದ್ವೇಷದ ಭಾವನೆ ಹೋಗಿ ಶಾಂತಿ ನೆಲಸಲಿ, ಸ್ನೇಹ, ಸಂಬ0ಧಗಳು ಬಲಗೊಳ್ಳಲಿ ಎಂದು ಪ್ರಾರ್ಥಿಸಿ ಈ ಕಾರ್ಯಕ್ರಮ ಆಯೋಜಿಸಿದ್ದು ಪ್ರತಿವರ್ಷವೂ ಈ ಕಾರ್ಯ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದರು.

ಗುರುಪೌರ್ಣಿಮವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು, ಗುರುವಿನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ, ಗೊ0ದಲವಾಗದ0ತೆ ಊಟದ ವ್ಯವಸ್ಥೆ ಕಲ್ಪಿಸುವ ಸಂಕಲ್ಪದೊ0ದಿಗೆ ತಾವು ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ತಮ್ಮ ಬೆಂಬಲಿಗರೊ0ದಿಗೆ ದೇವಾಲಯಕ್ಕೆ ಆಗಮಿಸಿ ಸುಮಾರು ೪೦ ನಿಮಿಷ ವಿಶೇಷ ಪೂಜೆ ಸಲ್ಲಿಸಿದರು. ಶಿರಡಿ ಮಾದರಿಯಲ್ಲಿ ಇಲ್ಲಿಯೂ ಕಾಕಡಾರತಿ ನಡೆಸಿದ್ದು, ಅಷ್ಟುಹೊತ್ತು ಸಚಿವರು ನಿಂತೇ ಭಜನೆ ಮಾಡಿದರು.ಬೆಂಬಲಿಗರಾದ ಕೆ.ಜಯದೇವ್, ಊರುಬಾಗಿಲು ಶ್ರೀನಿವಾಸ್,ಪ್ರಸಾದ್‌ಬಾಬು ಮತ್ತಿತರರಿದ್ದರು.

ಅನ್ನದಾಸೋಹದ ಉಸ್ತುವಾರಿಯನ್ನು ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದ ತಂಡದ ಅಣ್ಣಿಹಳ್ಳಿ ನಾಗರಾಜ್, ನೆನುಮನಹಳ್ಳಿ ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿರೆಡ್ಡಿ, ರುದ್ರಸ್ವಾಮಿ, ಟಿಪಿಸಿಎಂಎಸ್ ನಿರ್ದೇಶಕ ಮುನಿಸ್ವಾಮಿರೆಡ್ಡಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬೈರೇಗೌಡ, ಕೆಜಿಎಫ್ ನಗರದ ಅಮರೇಂದ್ರಮೌನಿ, ಒಬಿಸಿ ಮುನಿಸ್ವಾಮಿ, ಭಾರ್ಗವರಾಮ್, ಮುಖಂಡರಾದ ನಗರಸಭಾ ಸದಸ್ಯ ರಾಕೇಶ್, ಎಸ್‌ಎಸ್‌ಎಲ್‌ವಿ ಸೂಪರ್‌ಮಾರ್ಕೆಟ್‌ನ ಶ್ರೀನಾಥ್, ಶ್ರೀರಾಮ ಕಾಫಿವಕ್ಸ್ ಶ್ರೀನಾಥ್. ಪಿಸಿ ಬಡಾವಣೆ ಜಗದೀಶ್, ಆಟೋ ನಾರಾಯಣಸ್ವಾಮಿ ಮತ್ತಿತರರು ವಹಿಸಿ ಕೆಲಸ ನಿರ್ವಹಿಸಿದರು.

ಎಲ್ಲರಿಗೂ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ಹಾಗೂ ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡ ಹಬ್ಬದೂಟದ ವ್ಯವಸ್ಥೆ ಮಾಡಿಸಿದ್ದುದು ವಿಶೇಷವಾಗಿತ್ತು.

ಚಿತ್ರ : ಕೋಲಾರದ ಬಾಬಾ ಮಂದಿರದಲ್ಲಿ ಗುರುಪೂರ್ಣಿಮಾ ಅಂಗವಾಗಿ ವಿಶೇಷ ಪೂಜೆ ನಡೆದಿದ್ದು, ೨೫ ಸಾವಿರಕ್ಕೂ ಹೆಚ್ಚು ಮಂದಿಗೆ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಬ್ಬದೂಟದೊಂದಿಗೆ ಅನ್ನದಾಸೋಹ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande