ಡಿಜಿಟಲ್ ಇಂಡಿಯಾ ಹತ್ತು ವರ್ಷಗಳ ಸಾಧನೆ ; ರಾಷ್ಟ್ರಮಟ್ಟದ ಸಂಭ್ರಮ
ನವದೆಹಲಿ, 01 ಜುಲೈ (ಹಿ.ಸ.) : ಆ್ಯಂಕರ್ : ಡಿಜಿಟಲ್ ಇಂಡಿಯಾ ಹತ್ತು ವರ್ಷಗಳ ಸಾಧನೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಐತಿಹಾಸಿಕ ದಿನ ಎಂದು ಹೇಳಿದ್ದಾರೆ. 2015ರ ಜುಲೈ 1ರಂದು ಆರಂಭವಾದ ಡಿಜಿಟಲ್ ಇಂಡಿಯಾ ಅಭಿಯಾನ, ದೇಶವನ್ನು ತಾಂತ್ರಿಕವಾಗಿ ಸಬಲೀಕರಿಸಿದ ಮಹತ್ವದ ಕ್ರಾಂತಿಯಾಗಿ ಪರಿಗಣಿಸಲಾಗಿದ
Pm


ನವದೆಹಲಿ, 01 ಜುಲೈ (ಹಿ.ಸ.) :

ಆ್ಯಂಕರ್ : ಡಿಜಿಟಲ್ ಇಂಡಿಯಾ ಹತ್ತು ವರ್ಷಗಳ ಸಾಧನೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಐತಿಹಾಸಿಕ ದಿನ ಎಂದು ಹೇಳಿದ್ದಾರೆ.

2015ರ ಜುಲೈ 1ರಂದು ಆರಂಭವಾದ ಡಿಜಿಟಲ್ ಇಂಡಿಯಾ ಅಭಿಯಾನ, ದೇಶವನ್ನು ತಾಂತ್ರಿಕವಾಗಿ ಸಬಲೀಕರಿಸಿದ ಮಹತ್ವದ ಕ್ರಾಂತಿಯಾಗಿ ಪರಿಗಣಿಸಲಾಗಿದೆ.

ಹತ್ತು ವರ್ಷಗಳ ಪ್ರಯಾಣದಲ್ಲಿ 140 ಕೋಟಿ ಭಾರತೀಯರ ಸಹಭಾಗಿತ್ವದಿಂದ, ಡಿಜಿಟಲ್ ಪಾವತಿ, ಆರೋಗ್ಯ, ಶಿಕ್ಷಣ, ಆನ್‌ಲೈನ್ ಸೇವೆಗಳಲ್ಲಿ ಭಾರತವು ಮಹತ್ತರ ಪ್ರಗತಿ ಸಾಧಿಸಿದೆ. ವಿಶೇಷವಾಗಿ ಯುಪಿಐ, ಆಯುಷ್ಮಾನ್ ಭಾರತ್, ದಿಕ್ಷಾ, ಡಿಜಿಟಲ್ ಹೆಲ್ತ್ ಮಿಷನ್ ಮುಂತಾದ ಯೋಜನೆಗಳು ಕೋಟ್ಯಂತರ ಜನರ ಬದುಕು ಸುಲಭಗೊಳಿಸಿವೆ ಎಂದು ಪ್ರಧಾನಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande