ನವದೆಹಲಿ, 01 ಜುಲೈ (ಹಿ.ಸ.) :
ಆ್ಯಂಕರ್ : ವಕ್ಫ್ ತಿದ್ದುಪಡಿ ಕಾಯ್ದೆಗೆ ವಿರೋಧವಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ತೇಜಸ್ವಿಗೆ ಶರಿಯಾ ಕಾನೂನು ಬೇಕು. ಅವರು ಸಂವಿಧಾನಕ್ಕೆ ವಿಧೇಯರಲ್ಲ. ಅವರ ಹೇಳಿಕೆ ದೇಶವನ್ನು ವಿಭಜಿಸುವ ರಾಜಕಾರಣಕ್ಕೆ ಉತ್ತೇಜನ ನೀಡುತ್ತದೆ ಎಂದು ಕಿಡಿಕಾರಿದ್ದಾರೆ.
ತೇಜಸ್ವಿ ಯಾದವ್ ವಕ್ಫ್ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ಹೇಳಿದ್ದನ್ನು ಉಲ್ಲೇಖಿಸಿ, ಬಿಜೆಪಿ ಇದು ಸಂವಿಧಾನದ ಅವಮಾನ ಎಂದು ವಾಗ್ದಾಳಿ ನಡೆಸಿದೆ. ಆರ್‌ಜೆಡಿ ಹಾಗೂ ತೇಜಸ್ವಿ ಯಾದವ್ ಅವರು ಜಂಗಲ್ ರಾಜ್ ಗೆ ಪ್ರತೀಕ ಎಂದು ಟೀಕಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa