ಹಿಮಾಚಲದಲ್ಲಿ ಭಾರಿ ಮಳೆ ; ಓರ್ವ ಸಾವು, ಹಲವರು ನಾಪತ್ತೆ
ಶಿಮ್ಲಾ, 01 ಜುಲೈ (ಹಿ.ಸ.) : ಆ್ಯಂಕರ್ : ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಸಂಭವಿಸಿದ ಮೇಘಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದು, 11 ಮಂದಿ ನಾಪತ್ತೆಯಾಗಿದ್ದಾರೆ. ಪಾಂಡೋ ಮಾರುಕಟ್ಟೆ, ಗೋಹರ್, ಕರ್ಸೋಗ್ ಪ್ರದೇಶಗಳಲ್ಲಿ ಪ್ರವಾಹದ ಪರಿಣಾಮ ಮನೆಗಳು ಮತ್ತು ಸೇತುವೆಗಳು ಧ್ವಂ
Rain


ಶಿಮ್ಲಾ, 01 ಜುಲೈ (ಹಿ.ಸ.) :

ಆ್ಯಂಕರ್ : ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಸಂಭವಿಸಿದ ಮೇಘಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದು, 11 ಮಂದಿ ನಾಪತ್ತೆಯಾಗಿದ್ದಾರೆ.

ಪಾಂಡೋ ಮಾರುಕಟ್ಟೆ, ಗೋಹರ್, ಕರ್ಸೋಗ್ ಪ್ರದೇಶಗಳಲ್ಲಿ ಪ್ರವಾಹದ ಪರಿಣಾಮ ಮನೆಗಳು ಮತ್ತು ಸೇತುವೆಗಳು ಧ್ವಂಸಗೊಂಡಿವೆ. ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.

ಬಿಯಾಸ್ ನದಿಗೆ ಭಾರಿ ಪ್ರಮಾಣದಲ್ಲಿ ನೀರನ್ನು ಬಿಡಲಾಗಿದ್ದು, ನದಿತೀರದ ಗ್ರಾಮಗಳಿಗೆ ತುರ್ತು ಎಚ್ಚರಿಕೆ ನೀಡಲಾಗಿದೆ. ಪಾಂಡೋ ಅಣೆಕಟ್ಟಿನ ನೀರಿನ ಮಟ್ಟ ಅಪಾಯದ ಹಂತ ತಲುಪಿದೆ. ಹಮೀರ್‌ಪುರದ ಖೇರಿ ಗ್ರಾಮದಲ್ಲಿ ಸಿಲುಕಿದ 20 ಜನರಲ್ಲಿ 15 ಜನರನ್ನು ರಕ್ಷಿಸಲಾಗಿದೆ.

ಮಂಡಿ, ಕಾಂಗ್ರಾ, ಹಮೀರ್‌ಪುರ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಆರು ಜಿಲ್ಲೆಗಳಿಗೆ ಪ್ರವಾಹ ಎಚ್ಚರಿಕೆ ಜಾರಿಯಲ್ಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande