ಫಾರ್ಮಾ ಕಂಪನಿ ಘಟಕದಲ್ಲಿ ಬೆಂಕಿ ಪ್ರಕರಣ : ಸಾವಿನ ಸಂಖ್ಯೆ ೩೫ಕ್ಕೆ ಏರಿಕೆ
ಸಂಗಾರೆಡ್ಡಿ, 1 ಜುಲೈ (ಹಿ.ಸ.) : ಆ್ಯಂಕರ್ : ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಾಶಾಮಿಲಾರಾಮ್ ಗ್ರಾಮದ ಕೈಗಾರಿಕಾ ಪ್ರದೇಶದ ಫಾರ್ಮಾ ಕಂಪನಿ ಘಟಕದಲ್ಲಿ ಸಂಭವಿಸಿದ ರಿಯಾಕ್ಟರ್​​ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಅನೇಕ ಮೃತದೇಹಗಳು ಅವಶೇಷಗಳ ಅಡಿ ಸಿಲುಕಿವೆ, ಅವಶೇಷಗಳನ್ನು
Fire


ಸಂಗಾರೆಡ್ಡಿ, 1 ಜುಲೈ (ಹಿ.ಸ.) :

ಆ್ಯಂಕರ್ : ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಾಶಾಮಿಲಾರಾಮ್ ಗ್ರಾಮದ ಕೈಗಾರಿಕಾ ಪ್ರದೇಶದ ಫಾರ್ಮಾ ಕಂಪನಿ ಘಟಕದಲ್ಲಿ ಸಂಭವಿಸಿದ ರಿಯಾಕ್ಟರ್​​ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಅನೇಕ ಮೃತದೇಹಗಳು ಅವಶೇಷಗಳ ಅಡಿ ಸಿಲುಕಿವೆ, ಅವಶೇಷಗಳನ್ನು ತೆರೆಯುವಾಗ ಸುಮಾರು 31 ಶವಗಳು ಪತ್ತೆಯಾಗಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ವೇಳೆ ಮೃತಪಟ್ಟಿದ್ದು, ಅಂತಿಮ ಹಂತದ ರಕ್ಷಣಾ ಕಾರ್ಯ ಸಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪರಿತೋಷ್​ ಪಂಜಕ್​ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸ್ಪೋಟ ಸಂಭವಿಸಿದ ಸ್ಥಳಕ್ಕೆ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಮತ್ತು ಆರೋಗ್ಯ ಸಚಿವ ಸಿ ದಾಮೋದರ್​ ರಾಜನರಸಿಂಹ ಆಗಮಿಸಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande