ಮರಿಯಮ್ಮನಹಳ್ಳಿ, 07 ಜೂನ್ (ಹಿ.ಸ.) :
ಆ್ಯಂಕರ್ : ಮರಿಯಮ್ಮನಹಳ್ಳಿ
ಬಿ.ಎಂ.ಎಂ. ಇಸ್ಪಾತ್ ಲಿಮಿಟೆಡ್ , ಮರಿಯಮ್ಮನಹಳ್ಳಿಯ ಸರ್ಕಾರಿ ಉಪಕರಣಗಾರ ತರಬೇತಿ (ಜಿ.ಟಿ.ಟಿ.ಸಿ.) ಕೇಂದ್ರದಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗಾಗಿ 2025-26ನೇ ಸಾಲಿಗೆ ಎರಡು ತಿಂಗಳ ಅವಧಿಯ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ.
ಎಸ್.ಎಸ್.ಎಲ್.ಸಿ, ಐ.ಟಿ.ಐ, ಡಿಪ್ಲೊಮಾ ಸೇರಿದಂತೆ ಯಾವುದೇ ಪದವಿ ಉತ್ತೀರ್ಣರಾದ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ತರಬೇತಿಗೆ ಅರ್ಹರು.
ತರಬೇತಿ ಮುಗಿದ ನಂತರ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಿ.ಎಂ.ಎಂ. ಸಂಸ್ಥೆಯ ಸಿ.ಎಸ್.ಆರ್ ವಿಭಾಗದ ವ್ಯವಸ್ಥಾಪಕರಾದ ಶ್ರೀ ಅರುಣ್ ಕುಮಾರ್.ಎಂ, ರವರು ಕರೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ: 9845416198, 8722999929, 9035105543 ಸದುಪಯೋಗಪಡಿ ಸಿಕೊಳ್ಳಿ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ