ಭಾಗ್ಯನಗರ ಪ.ಪಂ. ಆಸ್ತಿ ಮಾಲೀಕರಿಗೆ ಸೂಚನೆ
ಕೊಪ್ಪಳ, 27 ಜೂನ್ (ಹಿ.ಸ.) : ಆ್ಯಂಕರ್ : ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯ ಆಸ್ತಿ ಮಾಲೀಕರು ಆಸ್ತಿ ತಂತ್ರಾಂಶದಲ್ಲಿ ಇ-ಖಾತಾ/ನಮೂನೆ-03 ಅರ್ಜಿ ಸಲ್ಲಿಸಲು ಸಿಟಿಜನ್ ಮಾಡ್ಯೂಲ್ ಒದಗಿಸಿದ್ದು, ತಮ್ಮ ಆಸ್ತಿಯ ಇ-ಖಾತಾ ಅರ್ಜಿಗಳನ್ನು ಇನ್ನು ಮುಂದೆ ಕರ್ನಾಟಕ ಒನ್ ಗಳ ಮೂಲಕ ಸಲ್ಲಿಸಬಹುದು. ನಾಗರಿಕ
ಭಾಗ್ಯನಗರ ಪ.ಪಂ. ಆಸ್ತಿ ಮಾಲೀಕರಿಗೆ ಸೂಚನೆ


ಕೊಪ್ಪಳ, 27 ಜೂನ್ (ಹಿ.ಸ.) :

ಆ್ಯಂಕರ್ : ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯ ಆಸ್ತಿ ಮಾಲೀಕರು ಆಸ್ತಿ ತಂತ್ರಾಂಶದಲ್ಲಿ ಇ-ಖಾತಾ/ನಮೂನೆ-03 ಅರ್ಜಿ ಸಲ್ಲಿಸಲು ಸಿಟಿಜನ್ ಮಾಡ್ಯೂಲ್ ಒದಗಿಸಿದ್ದು, ತಮ್ಮ ಆಸ್ತಿಯ ಇ-ಖಾತಾ ಅರ್ಜಿಗಳನ್ನು ಇನ್ನು ಮುಂದೆ ಕರ್ನಾಟಕ ಒನ್ ಗಳ ಮೂಲಕ ಸಲ್ಲಿಸಬಹುದು.

ನಾಗರಿಕ ಮಾಡ್ಯೂಲ್ ಹಾಗೂ ಹೆಲ್ಪ್‍ಡೆಸ್ಕ್ ಮೂಲಕ ಅರ್ಜಿ ಸಲ್ಲಿಸಲು ಪೌರಾಡಳಿತ ನಿರ್ದೇಶನಾಲಯ ಮತ್ತು ಕೆ.ಎಂ.ಡಿ.ಎಸ್ ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ.ಪಂ. ಮುಖ್ಯಾಧಿಕಾರಿ ಸುರೇಶ ಬಬಲಾದ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande