ಲಿಪಿಕ ಸಿಬ್ಬಂದಿಯ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ, 27 ಜೂನ್ (ಹಿ.ಸ.): ಆ್ಯಂಕರ್: ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಓರ್ವ ಲಿಪಿಕ ಸಿಬ್ಬಂದಿಯನ್ನು ಲಿಖಿತ ಪರೀಕ್ಷೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆರ್ಹರಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯು ಸಂಪೂರ್ಣ ತಾತ್ಕಾಲಿಕವ
ಲಿಪಿಕ ಸಿಬ್ಬಂದಿಯ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ


ಶಿವಮೊಗ್ಗ, 27 ಜೂನ್ (ಹಿ.ಸ.):

ಆ್ಯಂಕರ್:

ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಓರ್ವ ಲಿಪಿಕ ಸಿಬ್ಬಂದಿಯನ್ನು ಲಿಖಿತ ಪರೀಕ್ಷೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆರ್ಹರಿಂದ ಅರ್ಜಿ ಆಹ್ವಾನಿಸಿದೆ.

ಈ ನೇಮಕಾತಿಯು ಸಂಪೂರ್ಣ ತಾತ್ಕಾಲಿಕವಾಗಿದ್ದು, 60 ವರ್ಷಗಳ ವಯೋಮಿತಿ ಮೀರದ ಮಾಜಿ ಸೈನಿಕರಿಗೆ ಮೀಸಲಾಗಿರುತ್ತದೆ. ಈ ನೇಮಕಾತಿಯು ಸರ್ಕಾರದ ಖಾಯಂ ಹುದ್ದೆಗೆ ಸಮನಾಗಿರುವುದಿಲ್ಲ ಮತ್ತು ಸೇವಾ ಖಾಯಮಾತಿಗೆ ಅವಕಾಶವಿರುವುದಿಲ್ಲ. ಕೇಂದ್ರ ಸಶಸ್ತ್ರ ಸೇನಾಪಡೆಗಳ ಯಾವುದಾದರೂ ಒಂದು ವಿಭಾಗದಲ್ಲಿ ಲಿಪಿಕ ನೌಕರರಾಗಿ ಸೇವೆ ಸಲ್ಲಿಸಿದ್ದು, ಸೇನಾಸೇವೆಯ ನಿವೃತ್ತಿ ನಂತರ ಕೇಂದ್ರ / ರಾಜ್ಯ ಸರ್ಕಾರದ ಕಛೇರಿಗಳಲ್ಲಿ ಲಿಪಿಕ ನೌಕರರಾಗಿ ಖಾಯಂ / ಹಂಗಾಮಿಯಾಗಿ ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸಿದವರಿಗೆ, ಆದ್ಯತೆ ನೀಡಲಾಗುತ್ತದೆ. ಕನ್ನಡ, ಹಿಂದಿ ಮತ್ತು ಆಂಗ್ಲಭಾಷೆಗಳಲ್ಲಿ ಸಂವಹನವು (ಬರೆಯಲು / ಓದಲು /ಮಾತನಾಡಲು) ಮತ್ತು ಗಣಕ ಯಂತ್ರದಲ್ಲಿ ಕನ್ನಡ / ಇಂಗ್ಲೀಷ್ ಬೆರಳಚ್ಚು ಪ್ರಾವೀಣ್ಯತೆಯು ಅತ್ಯಗತ್ಯವಾಗಿರುತ್ತದೆ.

ಆಸಕ್ತರು ದಿನಾಂಕ.07.07.2025 ರೊಳಗಾಗಿ ಅರ್ಜಿಯನ್ನು ತಮ್ಮ ಸ್ವಹಸ್ತಾಕ್ಷರದಲ್ಲಿ ಪೂರ್ಣ ಸ್ವವಿವರಗಳೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08182220925/ಸಂಪರ್ಕಿಸುವುದು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande