10 Jul 2025, 20:20 HRS IST

ರಾಯಚೂರು ಜಿಲ್ಲೆಯಲ್ಲಿ 11 ಆಶಾ ಕಿರಣ ದೃಷ್ಟಿ ಕೇಂದ್ರ ಸ್ಥಾಪನೆ : ಸಿಇಒ ರಾಹುಲ್
ರಾಯಚೂರು , 21 ಜೂನ್ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ 11 ಆಶಾ ಕಿರಣ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅಂಧತ್ವ ಸಮಸ್ಯೆಯಿಂದ ಬಳಲುತ್ತಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಮ್ ಪಾಂಡ್ವೆ ತಿಳಿ
ರಾಯಚೂರು ಜಿಲ್ಲೆಯಲ್ಲಿ 11 ಆಶಾ ಕಿರಣ ದೃಷ್ಠಿ ಕೇಂದ್ರ ಸ್ಥಾಪನೆ: ಸಿಇಒ ರಾಹುಲ್


ರಾಯಚೂರು ಜಿಲ್ಲೆಯಲ್ಲಿ 11 ಆಶಾ ಕಿರಣ ದೃಷ್ಠಿ ಕೇಂದ್ರ ಸ್ಥಾಪನೆ: ಸಿಇಒ ರಾಹುಲ್


ರಾಯಚೂರು ಜಿಲ್ಲೆಯಲ್ಲಿ 11 ಆಶಾ ಕಿರಣ ದೃಷ್ಠಿ ಕೇಂದ್ರ ಸ್ಥಾಪನೆ: ಸಿಇಒ ರಾಹುಲ್


ರಾಯಚೂರು , 21 ಜೂನ್ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ 11 ಆಶಾ ಕಿರಣ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅಂಧತ್ವ ಸಮಸ್ಯೆಯಿಂದ ಬಳಲುತ್ತಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಮ್ ಪಾಂಡ್ವೆ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರ ಆಶಾ ಕಿರಣ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಆಶಾ ಕಿರಣ ಕೇಂದ್ರಗಳನ್ನು ಸ್ಥಾಪಿಸಲಾಗಿರುವ ಪೈಕಿ ರಾಯಚೂರು ಜಿಲ್ಲೆಗೆ 11 ಆಶಾ ಕಿರಣ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 1,ರಿಮ್ಸ್ ಭೋಧಕ ಆಸ್ಪತ್ರೆ, 4,ತಾಲೂಕ ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದಗಳಲ್ಲಿ 6 ಕಡೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರಗಳಲ್ಲಿ ಜಿಲ್ಲೆಯಲ್ಲಿರುವ ಕಾಯಂ ನೇತ್ರಾಧಿಕಾರಿಗಳನ್ನು ಶಾಶತ್ವ ನಿಯೋಜನೆ ಮಾಡಿ, ಕೇಂದ್ರಗಳಿಗೆ ಸ್ಥಳೀಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಂದ ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ದೃಷ್ಟಿ ದೋಷ ಹೊಂದಿದವರನ್ನು ತಪಾಸಣೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ತಪಾಸಣೆ ಸಮಯದಲ್ಲಿ ದೃಷ್ಟಿ ದೋಷ ಕಂಡು ಬಂದ ವಯೋ ವೃದ್ದರಿಗೆ 634 ಕನ್ನಡಕಗಳನ್ನು ವಿತರಣೆ ಮಾಡಲಾಗಿರುತ್ತದೆ, ಕಣ್ಣಿನ ಪೊರೆ ಕಂಡು ಬಂದವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ರಾಷ್ಠ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಅಂಧತ್ವ ಪ್ರಗತಿಯ ಪರಿಶೀಲನೆಯಲ್ಲಿ ಜಿಲ್ಲೆಯ ಒಟ್ಟು 6920 ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಗುರಿ ಇರುತ್ತದೆ. ಅದರನ್ವಯ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಸಂಸ್ಥೆಗಳು ಹಾಗೂ ಒಡಬಂಡಿಕೆ ಹೊಂದಿರುವ ಎನ್.ಜಿ.ಓ ಕಣ್ಣಿನ ಆಸ್ಪತ್ರೆಗಳು ಮತ್ತು ನಗರದ ಖಾಸಗಿ ಆಸ್ಪತ್ರೆಗಳು ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ.

ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಹೊಂದಿದ ವಿವರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿ, ರಿಮ್ಸ್ ಆಸ್ಪತ್ರೆ ರಾಯಚೂರಿನಲ್ಲಿ ಒಟ್ಟು 1567, ತಾಲೂಕ ಆಸ್ಪತ್ರೆ ಮಾನ್ವಿ 688 ಮತ್ತು ಸಿಂಧನೂರುನಲ್ಲಿ 433, 2024-25 ಸಾಲಿನಲ್ಲಿ ಒಡಂಬಡಿಕೆಯಾದ ಎನ್‍ಜಿಓ ಸಂಸ್ಥೆಗಳಾದ ಶಂಕರ್ ಐ ಆಸ್ಪತ್ರೆ ಶಿವಮೊಗ್ಗ ಇವರು ಸಿಂಧನೂರು ಮತ್ತು ಲಿಂಗಸೂಗುರುನಲ್ಲಿ ಒಟ್ಟು 1082 , ಜನಹಿತ ಐ ಕೇರ್ ದೇವದುರ್ಗ ಮತ್ತು ಮಾನ್ವಿಯಲ್ಲಿ ಒಟ್ಟು 1521, ಶ್ರೀ ವಿವೇಕನಂದ ಸೇವಾ ಆಶ್ರಮ ಬೆಂಗಳೂರು ಇವರು 1411, ನಗರದ ಖಾಸಗಿ ಆಸ್ಪತ್ರೆಗಳು, ನವೋದಯ ಮೆಡಿಕಲ್ ಕಾಲೇಜ್, ಎಂ.ಕೆ.ಬಿ.ಭಂಡಾರಿ, ದೃಷ್ಠಿ ಐ ಕೇರ್ ಆಸ್ಪತ್ರೆ ಎಂ.ಎಂ.ಜ್ಯೋಷಿ ಇವರು 264 ಕಣ್ಣಿನ ಪೊರೆಗಳ ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ರಾಯಚೂರು ಜಿಲ್ಲೆಯಲ್ಲಿ ಒಟ್ಟು 6966 ಉಚಿತ ಕಣ್ಣಿನ ಪೊರೆ ಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ.

ಆರೋಗ್ಯ ಕೇಂದ್ರದ ತಪಾಸಣೆ ವೇಳೆ 9 ಮಕ್ಕಳಲ್ಲಿ ಕಣ್ಣಿನ ಪೊರೆ ಕಂಡು ಬಂದಿದ್ದು ಅದರಲ್ಲಿ ಒಟ್ಟು 8 ಮಕ್ಕಳಿಗೆ ಶಂಕರ ಐ ಆಸ್ಪತ್ರೆ ಶಿವಮೊಗ್ಗ ಇವರು ಶಿವಮೊಗ್ಗ ಅವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಿಸಿ ಕಳುಹಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಆಶಾ ಕಿರಣ ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಮಕ್ಕಳ ದೃಷ್ಟಿ ದೋಷ ತಪಾಸಣೆಗಾಗಿ ಒಟ್ಟು 13,500 ಗುರಿ ಇದೆ. ಅದರನ್ವಯ ಜಿಲ್ಲೆಯಲ್ಲಿ ಒಟ್ಟು ಸರಕಾರಿ ಶಾಲಾ ಮಕ್ಕಳು 2,61,889 ಮತ್ತು ಅರೇ ಸರಕಾರಿ 23,644 ಇದ್ದು, ಶಾಲಾ ಮಕ್ಕಳಿಗೆ ಆರೋಗ್ಯ ಕೇಂದ್ರದಲ್ಲಿರುವ 12 ನೇತ್ರಾಧಿಕಾರಿಗಳ ಮುಖಾಂತರ ಮತ್ತು ಆರ್.ಬಿ.ಎಸ್.ಕೆ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 12 ನೇತ್ರಾಧಿಕಾರಿಗಳ ಮುಖಾಂತರ ಶಾಲಾ ಮಕ್ಕಳಿಗೆ ನೇತ್ರಾ ಪರೀಕ್ಷೆ ಮಾಡಿದಾಗ ಅದರಲ್ಲಿ ಒಟ್ಟು 6981 ದೃಷ್ಟಿ ದೋಷ ಹೊಂದಿರುವ ಮಕ್ಕಳು ಕಂಡು ಬಂದಿರುತ್ತಾರೆ. ದೃಷ್ಟಿ ದೋಷ ಕಂಡುಬಂದ ಮಕ್ಕಳಿಗೆ ಆಶಾ ಕಿರಣ ಅಪ್ಲಿಕೇಷನ್ ಮೂಲಕ 4276 ಕನ್ನಡಕ ವಿತರಣೆ ಮಾಡಲಾಗಿರುತ್ತದೆ.

ಇನ್ನುಳಿದ ಕನ್ನಡಕಗಳು 2025-26ನೇ ಸಾಲಿನಲ್ಲಿ ಶಾಲೆ ಪ್ರಾರಂಭವಾದ ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ.

2024-25ನೇ ಸಾಲಿನಲ್ಲಿ ಆಶಾ ಕಿರಣ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದು. ಅದರಂತೆ ಎಲ್ಲಾ ಆಶಾ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ, ದೃಷ್ಟಿ ತಪಾಸಣೆ ಕೈಗೊಂಡಿರುತ್ತಾರೆ, ಇದರಲ್ಲಿ ದೃಷ್ಟಿ ದೋಷ ಕಂಡು ಬಂದಿರುವ ಪಲಾನುಭವಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ನೇತ್ರಾಧಿಕಾರಿಗಳಿಂದ ಪುನಃ ತಪಾಸಣೆ ಮಾಡಿ 71 ಸಾವಿರ ದೃಷ್ಟಿ ದೋಷ ಉಳ್ಳವರನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ಆರು ಸಾವಿರ ಶಾಲಾ ಮಕ್ಕಳು ಮತ್ತು ವಯೋವೃದ್ಧರು ಇರುತ್ತಾರೆ. ಇವರೆಲ್ಲರಿಗೆ ಕನ್ನಡಕಗಳು ನೇತ್ರಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರ ಮೂಲಕ ಇದುವರೆಗೆ 40,000 ಜನರಿಗೆ ಹಂಚಲಾಗಿರುತ್ತದೆ, ಇನ್ನುಳಿದವರಿಗೆ ಕೂಡ ಹಂಚಿಕೆಯು ಪ್ರಗತಿಯಲ್ಲಿರುತ್ತದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande