ಬಳ್ಳಾರಿ, 17 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್‍ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜವಳಕರ್ ವಿನಯ್ ಕುಮಾರ್ ಅವರು `ಸ್ಟಡಿ ಅಂಡ್ ಕ್ಯಾರೆಕ್ಟರೈಝೇಷನ್ ಆಫ್ ಬಯೋಸೆನ್ಸರ್ ಯೂಸ್ಡ್ ಫಾರ್ ಹಾರ್ಮೋನ್ ಡಿಟೆಕ್ಷನ್ ಇನ್ ವುಮೆನ್ ಹ್ಯಾವಿಂಗ್ ಕಾರ್ಡಿಯಾಕ್ ಡಿಸೀಸಸ್ ಡ್ಯೂರಿಂಗ್ ಪೋಸ್ಟ್ ಮೆನೋಪಾಸ್' ವಿಷಯದ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಘೋಷಣೆ ಮಾಡಿದೆ.
ಬೆಂಗಳೂರಿನ ಆರ್‍ವಿ ಎಂಜಿನಿಯರಿಂಗ್ ಕಾಲೇಜಿನ ಇಸಿಇ ವಿಭಾಗದ ಅಸೋಸಿಯೇಟ್ ಪ್ರೊ ಡಾ. ಶೈಲಶ್ರೀ .ಎನ್ ಅವರ ಮಾರ್ಗದರ್ಶನದಲ್ಲಿ ಅವರು ಮಹಾಪ್ರಬಂಧವನ್ನು ರಚಿಸಿದ್ದರು.
ಮಹಿಳೆಯರಲ್ಲಿ ಮುಟ್ಟುನಿಂತ (ಮೋನೋಪಾಸ್) ನಂತರ ಉಂಟಾಗುವ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ ಮಹಿಳೆಯರಲ್ಲಿ ಹಾರ್ಮೋನ್‍ಗಳ ಪತ್ತೆಗಾಗಿ ಬಳಸುವ ಬಯೋಸೆನ್ಸರ್‍ಗಳ ಅಧ್ಯಯನ ಹಾಗೂ ಗುಣಲಕ್ಷಣಗಳ ವಿಶ್ಲೇಷಣೆಗೆ ಈ ಸಂಶೋಧನೆ ನೆರವಾಗಲಿದೆ ಎಂದು ಹೇಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್