ಕಲಬುರಗಿ, 17 ಜೂನ್ (ಹಿ.ಸ.) :
ಆ್ಯಂಕರ್ : ಪ್ರಸಕ್ತ 2025-26ನೇ ಸಾಲಿಗೆ ನೇಕಾರರು ಮುದ್ರಾ ಯೋಜನೆಯಡಿ ಕೇಂದ್ರ ಕಚೇರಿಯಿಂದ ಜಿಲ್ಲೆಗೆ ಭೌತಿಕ 10 ಗುರಿ ನಿಗದಿಪಡಿಸಿದ್ದು, ಈ ಯೋಜನೆಯಡಿ ಬ್ಯಾಂಕ್‍ನಿಂದ ಸಾಲ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ಕೈಮಗ್ಗ ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳೀಸಿದ್ದಾರೆ.
ಈ ಯೋಜನೆಯಡಿ ನೇಕಾರರು ಕೈಮಗ್ಗ ನೇಕಾರಿಕೆ ಉದ್ದೇಶಕ್ಕಾಗಿ ಕೈಮಗ್ಗ ಸಲಕರಣೆಗಳನ್ನು ಖರೀದಿಸಲು / ದುಡಿಮೆ ಬಂಡವಾಳಕ್ಕಾಗಿ ಸಾಲ ಸೌಲಭ್ಯವನ್ನು ಪಡೆಯಲು ಅವಕಾಶವಿದ್ದು, ಸಾಲದ ಮೊಬಲಗಿನ ಮೇಲೆ ಶೇ.20 ರಷ್ಟು ಅಥವಾ ಗರಿಷ್ಠ 25,000 ರೂ.ಗಳನ್ನು ಮಾರ್ಜಿನ್ ಮನಿಯಾಗಿ ಪಡೆಯಲು ಅವಕಾಶವಿರುತ್ತದೆ.
ಆಸಕ್ತಿಯುಳ್ಳ ಭರ್ತಿ ಮಾಡಿದ ಅರ್ಜಿಯೊಂದಿಗೆ ಕೈಮಗ್ಗ ನೇಕಾರರು ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿರುವ ನೇಕಾರರ ಗುರುತಿನ ಚೀಟಿ ಅಥವಾ ಪಾಸ್‍ಬುಕ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಪ್ರತಿಯನ್ನು ಕೂಡಲೇ ಕಲಬುರಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Samarth biral