ಕೊಪ್ಪಳ, 16 ಜೂನ್ (ಹಿ.ಸ.) :
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ, ಭಾರತ ಸರ್ಕಾರದ ವತಿಯಿಂದ 2025ನೇ ಸಾಲಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
2025ರ ಜುಲೈ 31 ಕ್ಕೆ ಅನ್ವಯವಾಗುವಂತೆ 05 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ(ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ, ಕ್ರೀಡೆ, ಸಮಾಜ ಸೇವೆ, ತಂತ್ರಜ್ಞಾನ, ಪರಿಸರ ಸಂಸರಕ್ಷಣೆ, ಕಲೆ, ಸಂಸ್ಕøತಿ ಮತ್ತು ನೂತನ ಆವಿಷ್ಕಾರಗಳು) ಎಲ್ಲಾ ಮಕ್ಕಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದ್ದು, ಜಾಲತಾಣ https://awards.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್