ಬಾಲ ಪುರಸ್ಕಾರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಳ್ಳಾರಿ, 16 ಜೂನ್ (ಹಿ.ಸ.) : ಆ್ಯಂಕರ್ : ಜಿಲ್ಲೆಯಲ್ಲಿ ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ ಹಾಗೂ ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ಸಂರಕ್ಷಣೆ, ಕಲೆ ಮತ್ತು ಸಂಸ್ಕೃತಿ ಮತ್ತು ನೂತನ ಅವಿಷ್ಕಾರಗಳನ್ನು ಮಾಡಿ ಉತ್ತಮ ಸಾಧನೆ ಮಾಡಿದ ಅರ್ಹ ಮಕ್ಕಳಿಂದ ಪ್ರಸ್ತಕ ಸಾಲ
ಬಾಲ ಪುರಸ್ಕಾರ ಪ್ರಶಸ್ತಿಗೆ ಅರ್ಜಿ ಆಹ್ವಾನ


ಬಳ್ಳಾರಿ, 16 ಜೂನ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ ಹಾಗೂ ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ಸಂರಕ್ಷಣೆ, ಕಲೆ ಮತ್ತು ಸಂಸ್ಕೃತಿ ಮತ್ತು ನೂತನ ಅವಿಷ್ಕಾರಗಳನ್ನು ಮಾಡಿ ಉತ್ತಮ ಸಾಧನೆ ಮಾಡಿದ ಅರ್ಹ ಮಕ್ಕಳಿಂದ ಪ್ರಸ್ತಕ ಸಾಲಿನ ರಾಷ್ಟ್ರೀಯ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗೆ ಆರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಅನ್‍ಲೈನ್ ಮೂಲಕ https://awards.gov.in ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

2025 ನೇ ಜುಲೈ 31 ಕ್ಕೆ ಅನ್ವಯವಾಗುವಂತೆ 05 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿರುವ ಸಾಧನೆ ಮಾಡಿರುವ ಎಲ್ಲಾ ಮಕ್ಕಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ನಗರದ ಕಂಟೋನ್ಮೆಂಟ್‍ನ ಶಾಂತಿಧಾಮ ಆವರಣದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿ ಅಥವಾ ದೂ.08392-241373 ಗೆ ಸಂಪರ್ಕಿಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande