ಫಾಕ್ಸ್ ಕಾನ್ ಕಂಪನಿಯಿ0ದ ಸಿಬಿಐಟಿ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ಡ್ರೆವ್
ಫಾಕ್ಸ್ ಕಾನ್ ಕಂಪನಿಯಿ0ದ ಸಿಬಿಐಟಿ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ಡ್ರೆವ್
ಕೋಲಾರ ನಗರದ ಹೊರ ವಲಯದ ಸಿಬಿಐಟಿ ತಾಂತ್ರಿಕ ಕಾಲೇಜಿನಲ್ಲಿ ಫಾಕ್ಸ್ ಕಾನ್ ಕಂಪನಿಯಿ0ದ ಪ್ಲೇಸ್‌ಮೆಂಟ್ ಡ್ರೆವ್ ನಡೆಯಿತು.


ಕೋಲಾರ, ೧೫ ಜೂನ್ (ಹಿ.ಸ) :

ಆ್ಯಂಕರ್ : ನಗರದ ಹೊರವಲಯದ ಸಿ. ಬೈರೆಗೌಡ ಇಂಜಿನಿಯರಿ0ಗ್ ಕಾಲೇಜಿನಲ್ಲಿ ಡೊಡ್ಡಬಳ್ಳಾಪುರ ಮೂಲದ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪನಿ ನಡೆಸಿದ ಪ್ಲೇಸ್ಮೆಂಟ್ ಡ್ರೈವ್ ಯಶಸ್ವಿಯಾಯಿತು. ಈ ಪ್ಲೇಸ್ಮೆಂಟ್ ಡ್ರೈವ್‌ನಲ್ಲಿ ೮೦೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ರಾಜ್ಯದ ನಾನಾ ಸ್ಥಳಗಳಿಂದ ಸಹ ಉದ್ಯೋಗಾಕಂಕ್ಷಿಗಳು ಭಾಗವಹಿಸಿದ್ದರು.

ಫಾಕ್ಸ್ ಕಾನ್ ಕಂಪನಿಯ ಲಾಂಗ್ ಮತ್ತು ಹೆಲೆನ್ ಅವರ ೬ ಜನರ ತಾಂತ್ರಿಕ ತಂಡ ಹಾಗೂ ಮಾನವ ಸಂಪನ್ಮೂಲ ಮುಖ್ಯಸ್ಥ ಸತೀಶ್ ಕುಮಾರ್ ನೇರವಾಗಿ ಹಾಜರಾಗಿ ತಾಂತ್ರಿಕ ಸಂದರ್ಶನ ಹಾಗೂ ವೈಯಕ್ತಿಕ ಸಂದರ್ಶನ ಹಂತಗಳನ್ನು ನಡೆಸಿತು. ಡ್ರೈವ್ ಪರಿಣಾಮವಾಗಿ ೩೦೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಕಂಪನಿಯಿAದ ಉದ್ಯೋಗದ ಅವಕಾಶವನ್ನು ಪಡೆದುಕೊಂಡರು ಎಂಬುದು ಸಿಬಿಐಟಿ ಕಾಲೇಜು ಮತ್ತು ಪಾಲಕರಿಗೆ ಹೆಮ್ಮೆಯ ವಿಷಯವಾಗಿದೆ.

ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಎನ್. ಚಂದ್ರಶೇಖರ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಈ ರೀತಿಯ ದೊಡ್ಡ ಮಟ್ಟದ ಪ್ಲೇಸ್ಮೆಂಟ್ ಡ್ರೈವ್ ಆಯೋಜನೆ ಆದದ್ದು ನಮ್ಮ ಕಾಲೇಜಿನ ಪ್ರತಿಭೆಗಳ ಮೇಲೆ ಕಂಪನಿಯ ವಿಶ್ವಾಸವನ್ನು ತೋರಿಸುತ್ತದೆ. ಉದ್ಯೋಗಾವಕಾಶ ಪಡೆದ ವಿದ್ಯಾರ್ಥಿಗಳಿಗೆ ಶುಭಾಶಯಗಳು ಎಂದು ಸಂತೋಷ ವ್ಯಕ್ತಪಡಿಸಿದರು.

ಫಾಕ್ಸಾನ್ ಕಂಪನಿಯ ಹಿರಿಯ ವ್ಯವಸ್ಥಾಪಕ ಲಾಂಗ್ ಮಾತನಾಡಿ ಕೋಲಾರ ಜಿಲ್ಲೆಯ ಯುವತೆಯ ಪ್ರತಿಭೆ ನಮ್ಮ ಕಂಪನಿಗೆ ಶಕ್ತಿ ನೀಡಲಿದೆ ಎಂಬುದು ನಮಗೆ ಖಚಿತವಾಗಿದೆ. ನಾವು ಆಯ್ಕೆ ಮಾಡಿದ ಅಭ್ಯರ್ಥಿಗಳು ನಮ್ಮ ಕಂಪನಿಯ ಬೆಳವಣಿಗೆಗೆ ಸಹಕರಿಸುತ್ತಾರೆ ಎಂದು ನಂಬಿದ್ದೇವೆ ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎ. ಪ್ರಭಾಕರರೆಡ್ಡಿ ಮತ್ತು ಕಾರ್ಯದರ್ಶಿ ವಿ. ಕೃಷ್ಣಾರೆಡ್ಡಿ ಕಾಲೇಜಿನ ಈ ಸಾಧನೆಯನ್ನು ಶ್ಲಾಘಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ಲೇಸ್ಮೆಂಟ್ ಡ್ರೈವ್ ಅನ್ನು ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ಡಾ. ಜಿ. ಕೆ. ವೆಂಕಟೇಶ್ ಮತ್ತು ತಂಡ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು, ವಿದ್ಯಾರ್ಥಿಗಳ ಪರವಾಗಿ ಶ್ಲಾಘನೆಗೆ ಪಾತ್ರವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಸಂತೋಷದಿ0ದ ತಮ್ಮ ಯಶಸ್ಸನ್ನು ಹಂಚಿಕೊ0ಡರು ಮತ್ತು ಪ್ಲೇಸ್ಮೆಂಟ್ ಅವಕಾಶ ಕಲ್ಪಿಸಿದವರಿಗೆ ಧನ್ಯವಾದ ತಿಳಿಸಿದರು.

ಚಿತ್ರ : ಕೋಲಾರ ನಗರದ ಹೊರ ವಲಯದ ಸಿಬಿಐಟಿ ತಾಂತ್ರಿಕ ಕಾಲೇಜಿನಲ್ಲಿ ಫಾಕ್ಸ್ ಕಾನ್ ಕಂಪನಿಯಿ0ದ ಪ್ಲೇಸ್‌ಮೆಂಟ್ ಡ್ರೆವ್ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande