ಪವನ ಶಕ್ತಿ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ : ಜೋಶಿ
ಬೆಂಗಳೂರು, 15 ಜೂನ್ (ಹಿ.ಸ.) : ಆ್ಯಂಕರ್ : ಬೆಂಗಳೂರು ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಗ್ಲೋಬಲ್ ವಿಂಡ್ ಡೇ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯದ ಇಂಧನ ಸಚಿವರು ಸೇರಿದಂತೆ ಪವನ ಶಕ್ತಿ ಕ್ಷೇತ್ರದ ಪ್ರಮುಖರು ಭಾಗವಹಿಸಿದರು. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಳೆದ ದಶಕದಲ್ಲಿ ಭ
Joshi


ಬೆಂಗಳೂರು, 15 ಜೂನ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಗ್ಲೋಬಲ್ ವಿಂಡ್ ಡೇ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯದ ಇಂಧನ ಸಚಿವರು ಸೇರಿದಂತೆ ಪವನ ಶಕ್ತಿ ಕ್ಷೇತ್ರದ ಪ್ರಮುಖರು ಭಾಗವಹಿಸಿದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಳೆದ ದಶಕದಲ್ಲಿ ಭಾರತವು 51.5 ಗಿಗಾವಾಟ್ ಪವನ ಶಕ್ತಿ ಸ್ಥಾಪನೆ ಮೂಲಕ 150% ಬೆಳವಣಿಗೆಯನ್ನು ದಾಖಲಿಸಿದ್ದು, ಇದೀಗ ಟರ್ಬೈನ್‌ಗಳನ್ನು ಜಾಗತಿಕವಾಗಿ ರಫ್ತು ಮಾಡುವ ಮಟ್ಟಕ್ಕೇ ತಲುಪಿದೆ. 2030ರೊಳಗೆ 100 GW ಪವನ ಶಕ್ತಿ ಹಾಗೂ ಕಡಲತೀರ ಯೋಜನೆಗಳಿಂದ 30 GW ಶಕ್ತಿ ಉತ್ಪಾದನೆ ಗುರಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ದೃಷ್ಟಿಕೋಣದಡಿ ಈ ಸಾಧನೆ ಸಾಧ್ಯವಾಗಿದೆ ಎಂದು ಸಚಿವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande