ಸ್ವಯಂ ಸೇವಕರಾಗಲು ಮಾಜಿ ಸೈನಿಕರಿಗೆ ಆಹ್ವಾನ
ಶಿವಮೊಗ್ಗ, 15 ಜೂನ್ (ಹಿ.ಸ.) : ಆ್ಯಂಕರ್ : ಡೈರೆಕ್ಟರ್ ಜನರಲ್ (ಅಗ್ನಿ ಶಾಮಕ, ನಾಗರಿಕ ರಕ್ಷಣಾ ಮತ್ತು ಗೃಹ ರಕ್ಷಕ) ಇವರು ಹೆಚ್ಚಿನ ಸಂಖ್ಯೆಯ ಮಾಜಿ ಸೈನಿಕರನ್ನು ನಾಗರಿಕ ರಕ್ಷಣೆಗೆ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಆಸಕ್ತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಪೋರ್ಟಲ್ ww
ಸ್ವಯಂ ಸೇವಕರಾಗಲು ಮಾಜಿ ಸೈನಿಕರಿಗೆ ಆಹ್ವಾನ


ಶಿವಮೊಗ್ಗ, 15 ಜೂನ್ (ಹಿ.ಸ.) :

ಆ್ಯಂಕರ್ : ಡೈರೆಕ್ಟರ್ ಜನರಲ್ (ಅಗ್ನಿ ಶಾಮಕ, ನಾಗರಿಕ ರಕ್ಷಣಾ ಮತ್ತು ಗೃಹ ರಕ್ಷಕ) ಇವರು ಹೆಚ್ಚಿನ ಸಂಖ್ಯೆಯ ಮಾಜಿ ಸೈನಿಕರನ್ನು ನಾಗರಿಕ ರಕ್ಷಣೆಗೆ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಆಸಕ್ತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಆನ್‌ಲೈನ್ ಪೋರ್ಟಲ್ www.civildefencewarriors.gov.in (CD warriors) ರಲ್ಲಿ ಅರ್ಜಿ ಸಲ್ಲಿಸುವುದು. ನೋಂದಾಯಿಸಿಕೊಂಡ ಸೈನಿಕರು ಅದಷ್ಟು ಶೀಘ್ರವಾಗಿ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಛೇರಿಯಲ್ಲಿ ತಮ್ಮ ಹೆಸರನ್ನು ದಾಖಲಿಸಬೇಕೆಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande