ಕೊಪ್ಪಳ : ಜೂನ್ 14 ರಂದು ವಿದ್ಯುತ್ ವ್ಯತ್ಯಯ
ಕೊಪ್ಪಳ, 12 ಜೂನ್ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110 ಕೆ.ವಿ ಕೊಪ್ಪಳ ಸ್ಟೇಷನ್ ಹಾಗೂ 33 ಕೆ.ವಿ ಕಿನ್ನಾಳ ಸ್ಟೇಷನ್‍ನ ನಿರ್ವಹಣೆ ಕಾಮಗಾರಿ (ಮೆಂಟೆನನ್ಸ್) ನಡೆಸುತ್ತಿರುವ ಪ್ರಯುಕ್ತ, ಜೂನ್ 14 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಸ್ಟೇಷನ್‍ಗಳ ವ್ಯ
ಕೊಪ್ಪಳ : ಜೂನ್ 14 ರಂದು ವಿದ್ಯುತ್ ವ್ಯತ್ಯಯ


ಕೊಪ್ಪಳ, 12 ಜೂನ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110 ಕೆ.ವಿ ಕೊಪ್ಪಳ ಸ್ಟೇಷನ್ ಹಾಗೂ 33 ಕೆ.ವಿ ಕಿನ್ನಾಳ ಸ್ಟೇಷನ್‍ನ ನಿರ್ವಹಣೆ ಕಾಮಗಾರಿ (ಮೆಂಟೆನನ್ಸ್) ನಡೆಸುತ್ತಿರುವ ಪ್ರಯುಕ್ತ, ಜೂನ್ 14 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಸ್ಟೇಷನ್‍ಗಳ ವ್ಯಾಪ್ತಿಗೆ ಒಳಪಡುವ ಮಾರ್ಗಗಳಲ್ಲಿ ಹಾಗೂ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

110 ಕೆ.ವಿ ಕೊಪ್ಪಳ ಸ್ಟೇಷನ್ ಹಾಗೂ 33 ಕೆವಿ ಕಿನ್ನಾಳ ಸ್ಟೇಷನ್‍ಗೆ ಒಳಪಡುವ ಎಫ್-3ಎಸ್.ಜಿಕಾಲೇಜ್, ಎಫ್-8 ಭಾಗ್ಯನಗರ, ಎಫ್-9 ಬನ್ನಿಕಟ್ಟಿ, ಎಫ್-10 ಗವಿಮಠ, ಎಫ್-11 ಡಿ.ಸಿ ಆಫೀಸ್, ಎಫ್-12 ತಾಲೂಕ ಪಂಚಾಯತ್, ಎಫ್-14 ಜಾತ್ರ ಫೀಡರ್, ಎಫ್-1 ದೇವಲಾಪೂರ, ಎಫ್-2 ಕಿನ್ನಾಳ, ಎಫ್-3 ಓಜನಹಳ್ಳಿ, ಎಫ್-4 ಕಲಕೇರಿ, ಎಫ್-5 ಬುಡಶೆಟ್ನಾಳ, ಎಫ್-6 ಯತ್ನಟ್ಟಿ ಹಾಗೂ ಕೊಪ್ಪಳ ಸ್ಟೇಷನ್‍ಗೆ ಒಳಪಡುವ ಎಲ್ಲಾ ಐ.ಪಿ ಮತ್ತು ಕೆ.ಡಬ್ಲೂ.ಎಸ್ ಈ ಎಲ್ಲಾ 11 ಕೆವಿ ಮತ್ತು 33 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮೇಲಿನ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande