ಕಲಬುರಗಿ, 12 ಜೂನ್ (ಹಿ.ಸ.) :
ಆ್ಯಂಕರ್ : ವಿಧಾನ ಪರಿಷತ್ ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವದೊಂದಿಗೆ ಕಲಬುರಗಿ ನಗರದ ವೆಂಕಟೇಶ ನಗರದಲ್ಲಿ ನೆರವೇರಿಸಲಾಯಿತು.
ಅದಕ್ಕೂ ಮುನ್ನ ವೆಂಕಟೇಶ್ವರ ಕಾಲೋನಿ ನಿವಾಸ ಹಾಗೂ ವಿಜಯ ವಿದ್ಯಾಲಯ ಚರ್ಚ್ ಆವರಣದಲ್ಲಿ ಅತೀಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಕಾಂಗ್ರೆಸ್ ನಾಯಕನ, ರಾಜಕೀಯ ಮುಖಂಡರು ಸಮುದಾಯದ ಮುಖಂಡರು ಅಗಲಿದ ನಾಯಕನ ದರ್ಶನ ಪಡೆದಿ ಸಂತಾಪ ಸೂಚಿಸಿದರು.
ಬಳಿಕ ನಗರದ ವೆಂಕಟೇಶ್ವರ ಕಾಲೋನಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಸಾಂಪ್ರದಾಯದಂತೆ ಹಾಗೂ ಸಕಲ ಸರ್ಕಾರಿ ಗೌರವದೊಂದಿಗೆ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Samarth biral