ರಾಯಚೂರು, 12 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ 0-18 ವರ್ಷದೊಳಗಿನ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಮಕ್ಕಳಿಗೆ ಪೋಷಣೆ ಮತ್ತು ರಕ್ಷಣೆ ನೀಡಲು ಮಕ್ಕಳಿಲ್ಲದ ದಂಪತಿ, ಏಕ ಪೋಷಕ ಕುಟುಂಬಸ್ಥರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜೈವಿಕ ಕುಟುಂಬ ಹೊರತುಪಡಿಸಿ ಮತ್ತೊಂದು ಕೌಟುಂಬಿಕ ವಾತಾವರಣ ಹೊಂದಿರುವ ಪರ್ಯಾಯ ವ್ಯವಸ್ಥೆಯಲ್ಲಿ ಮಗುವಿನ ರಕ್ಷಣೆ ಇರಿಸುವುದನ್ನು ಪೋಷಕತ್ವ ಎನ್ನುತ್ತಾರೆ. ಮಕ್ಕಳ ಕಲ್ಯಾಣ ಸಮಿತಿಯಿಂದ ಆಯ್ಕೆ ಮಾಡಿ ಅರ್ಹತೆ ಹೊಂದಿರುವ, ಅಂಗೀಕಾರ ಪಡೆದಿರುವ ಹಾಗೂ ಮಕ್ಕಳ ರಕ್ಷಣೆಯನ್ನು ಮೇಲ್ವಿಚಾರಣೆಗೊಳಪಡುವ ವ್ಯವಸ್ಥೆ ಇದಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್(44)ರನ್ವಯ ಪೋಷಕತ್ವ ಯೋಜನೆಯಲ್ಲಿ ಮಕ್ಕಳನ್ನು ಇರಿಸಲು ಗುರುತಿಸಲ್ಪಟ್ಟ ಕುಟುಂಬ ಮಕ್ಕಳು ಕುಟುಂಬದ ವಾತವರಣದಲ್ಲಿ ಬೆಳೆಯಲು ಪ್ರೋತ್ಸಾಹಿಸಲು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ರಾಯಚೂರು ಆದೇಶದ ಮೇರೆಗೆ ಮಗುವಿಗೆ ಸಂಬಂಧವಿಲ್ಲದ ಕುಟುಂಬದಲ್ಲಿ ತಾತ್ಕಾಲಿಕವಾಗಿ ಅಥವಾ ವಿಸ್ತರಿಸಲ್ಪಟ್ಟ ಅವಧಿಗೆ ಮಕ್ಕಳನ್ನು ಪೋಷಕತ್ವ ಯೋಜನೆಯಡಿಯಲ್ಲಿ (ಈosಣeಡಿ ಅಚಿಡಿe) ನೀಡಬಹುದಾಗಿದೆ.
ಜಿಲ್ಲೆಯಲ್ಲಿನ ಮಕ್ಕಳಿಲ್ಲದ ದಂಪತಿ, ಏಕ ಪೋಷಕ ಕುಟುಂಬಸ್ಥರು, ಮಕ್ಕಳಿಗೆ ಪೋಷಣೆ ಮತ್ತು ರಕ್ಷಣೆ ನೀಡಲು ಆಸಕ್ತಿ ಇರುವವರು ಮಕ್ಕಳ ರಕ್ಷಣಾ ನಿರ್ದೇಶನಾಲಯ ಕಚೇರಿ ವಿಳಾಸ: ಮನೆ ಸಂಖ್ಯೆ: 1-9-138, ಪಶ್ಚಿಮ ಪೊಲೀಸ್ ಠಾಣೆ ಹಿಂದೆ, ಮಾರಮ್ಮಗುಡಿ ಎದುರುಗಡೆ, ಗೋಲ್ ಮಾರ್ಕೆಟ್, ಆಜಾದ್ ನಗರ, ರಾಯಚೂರು-584101. ದೂರವಾಣಿ ಸಂಖ್ಯೆ; 08532-226226, 7829981927, 8660627793ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಮರೇಶ ಹರಿವಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್