ಪಟ್ಟೇದ ಅಂಚು ಸೀರೆಗಳು ಮತ್ತು ಬಟ್ಟೆಗಳ ತಯಾರಕರಿಗೆ ಸೂಚನೆ
ಗದಗ, 01 ಜೂನ್ (ಹಿ.ಸ.) : ಆ್ಯಂಕರ್ : ಪಟ್ಟೇದ ಅಂಚು ಸೀರೆಗಳು ಮತ್ತು ಬಟ್ಟೆಗಳಿಗೆ ಜಿಯಾಗ್ರಾಫಿಕಲ್ ಇಂಡಿಕೇಶನ್ ಅರ್ಜಿಯನ್ನು ಗಜೇಂದ್ರಗಡ ತಾಲ್ಲೂಕಿನ ಮೂಲ ನೇಕಾರರನ್ನು ಕಾನೂನುಬದ್ಧ ಪಾಲಕರು ಮತ್ತು ಉತ್ಪಾದಕರು ಎಂದು ಔಪಚಾರಿಕವಾಗಿ ಗುರುತಿಸಲು ಮತ್ತು ನೋಂದಾಯಿಸಲು ಅಧಿಕೃತ ಬಳಕೆದಾರ ನೋಂದಣಿಯ ಸೌಲಭ್ಯವನ
ಪೋಟೋ


ಗದಗ, 01 ಜೂನ್ (ಹಿ.ಸ.) :

ಆ್ಯಂಕರ್ : ಪಟ್ಟೇದ ಅಂಚು ಸೀರೆಗಳು ಮತ್ತು ಬಟ್ಟೆಗಳಿಗೆ ಜಿಯಾಗ್ರಾಫಿಕಲ್ ಇಂಡಿಕೇಶನ್ ಅರ್ಜಿಯನ್ನು ಗಜೇಂದ್ರಗಡ ತಾಲ್ಲೂಕಿನ ಮೂಲ ನೇಕಾರರನ್ನು ಕಾನೂನುಬದ್ಧ ಪಾಲಕರು ಮತ್ತು ಉತ್ಪಾದಕರು ಎಂದು ಔಪಚಾರಿಕವಾಗಿ ಗುರುತಿಸಲು ಮತ್ತು ನೋಂದಾಯಿಸಲು ಅಧಿಕೃತ ಬಳಕೆದಾರ ನೋಂದಣಿಯ ಸೌಲಭ್ಯವನ್ನು 4 ಜೂನ್ 2025 ಸಮಯ: ಮಧ್ಯಾಹ್ನ 12:00 ರಿಂದ ಸಂಜೆ 6:00 ರವರೆಗೆ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘ ನಿಯಮಿತದ ಆವರಣ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ ಇಲ್ಲಿ ಸಂಯೋಜಿಸಲಾಗುತ್ತಿದೆ.

ನೋಂದಣಿಗೆ ಅಗತ್ಯವಿರುವ ದಾಖಲೆಗಳು: ಶಾಶ್ವತ ವಸತಿ ವಿಳಾಸ ಪುರಾವೆ (ಆಧಾರ ರ್ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ)ಇಲಾಖೆಯಿಂದ ನೀಡಿದ ಕೈಮಗ್ಗ ನೇಕಾರ ಗುರುತಿನ ಚೀಟಿ ಪೆಹೆಚಾನ್ ಕಾರ್ಡ, ಅರ್ಜಿದಾರರ 02 ಪಾಸ್ ಪೋರ್ಟ ಸೈಜ್ ಭಾವಚಿತ್ರ ಸಲ್ಲಿಸಬೇಕು. ನೇಕಾರರು ಖುದ್ದಾಗಿ ಹಾಜರಿರಬೇಕು.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ ಕೈಮಗ್ಗ ಮತ್ತು ಜವಳಿ ಇಲಾಖೆ ಕೊಠಡಿ ಸಂಖ್ಯೆ 206, 2ನೇ ಮಹಡಿ ಜಿಲ್ಲಾ ಪಂಚಾಯತ್ ಗದಗ ದೂ ಸಂ: 0916582238 ಹಾಗೂ ಅಧ್ಯಕ್ಷರು/ಕಾರ್ಯದರ್ಶಿಗಳು ಗಜೇಂದ್ರಗಡ ನೇಕಾರರ ಉತ್ಪಾದಕ ಸಂಘ ನಿ. ಗಜೇಂದ್ರಗಡ ದೂ ಸಂ:9916119489 ಇವರನ್ನು ಸಂಪರ್ಕಿಸ ಬಹುದಾಗಿದೆ.

ಗಜೇಂದ್ರಗಡ ತಾಲೂಕಿನ ಉತ್ಪಾದಕರು ಭಾಗವಹಿಸಿ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande