ಕಮಲ್ ಹಾಸನ್ ನಗರ ನಕ್ಸಲ್ : ಆರ್.ಅಶೋಕ
ಬೆಂಗಳೂರು, 28 ಮೇ (ಹಿ.ಸ.) : ಆ್ಯಂಕರ್ : ಕಮಲ್‌ ಹಾಸನ್‌ ಒಬ್ಬ ಹುಚ್ಚ. ಕನ್ನಡ ಸಿನಿಮಾದಲ್ಲಿ ಆತನಿಗೆ ಅವಕಾಶ ಸಿಕ್ಕಿತ್ತು. ಕನ್ನಡವನ್ನು ಅವಹೇಳನ ಮಾಡುವುದನ್ನು ನೋಡಿದರೆ ಆತನೊಬ್ಬ ನಗರ ನಕ್ಸಲ ಎಂಬುದು ಸ್ಪಷ್ಟವಾಗಿದೆ ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾ
Ashok


ಬೆಂಗಳೂರು, 28 ಮೇ (ಹಿ.ಸ.) :

ಆ್ಯಂಕರ್ : ಕಮಲ್‌ ಹಾಸನ್‌ ಒಬ್ಬ ಹುಚ್ಚ. ಕನ್ನಡ ಸಿನಿಮಾದಲ್ಲಿ ಆತನಿಗೆ ಅವಕಾಶ ಸಿಕ್ಕಿತ್ತು. ಕನ್ನಡವನ್ನು ಅವಹೇಳನ ಮಾಡುವುದನ್ನು ನೋಡಿದರೆ ಆತನೊಬ್ಬ ನಗರ ನಕ್ಸಲ ಎಂಬುದು ಸ್ಪಷ್ಟವಾಗಿದೆ ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲ ಕನ್ನಡಿಗರು ಕಮಲ್‌ ಹಾಸನ್‌ಗೆ ಬಹಿಷ್ಕಾರ ಹಾಕಬೇಕು. ರಾಜ್ಯದೊಳಗೆ ಬರಲು ಕೂಡ ಅವಕಾಶ ನೀಡಬಾರದು. ಕನ್ನಡಕ್ಕೆ ದ್ರೋಹ ಬಗೆದ ಈತನ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದು. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande