ಕಲಬುರಗಿ, 31 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಪಿಡಬ್ಲೂಡಿ ಸೆಕ್ಷನ್ ಇಂಜಿನಿಯರ್ ಕಲಬುರಗಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಲಬುರಗಿ ನಗರದ ಹುಸೇನಿ ಗಾರ್ಡನ್ ಬಳಿ ಇರುವ ಬಳ್ಳಾರಿ ಸೆಕ್ಷನ್ ಇಂಜಿನಿಯರ್ ಅಮಿನ್ ಮುಕ್ತಾರ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಆದಾಯಕ್ಕೂ ಹೆಚ್ಚು ಆಸ್ತಿ ಗಳಿಕೆ ಆರೋಪದ ಅಡಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಅಮಿನ್ ಮುಕ್ತಾರ್ ಕಲಬುರಗಿ ಮನೆಯಲ್ಲಿಯೇ ಇದ್ದರು. ಅಮಿನ್ ಮುಕ್ತಾರ್ ಸಹೋದರ ಡಾ. ಆರೀಫ್ ಅವರ ಏಷನ್ ಲೈಫ್ ಸ್ಟೈಲ್ ಅಪಾರ್ಟಮೆಂಟ್ ಮೇಲೂ ಲೋಕಾಯುಕ್ತ ದಾಳಿ ನಡೆಲಾಗಿದೆ.
ಕಲಬುರಗಿ, ಬಳ್ಳಾರಿ ಹಾಗೂ ಬಸವಕಲ್ಯಾಣದಲ್ಲೂ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ಹಾಗೂ ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳಿಂದ ಜಂಟಿ ಪರಿಶೀಲನೆ ಶುರುವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Samarth biral