ಗದಗ, 27 ಮೇ (ಹಿ.ಸ.) :
ಆ್ಯಂಕರ್ : ಗದಗ ಬೇಟಗೇರಿ ನಗರಸಭೆಯಿಂದ ನಹರದ ಸ್ವಚ್ಚತೆಗಾಗಿ ತ್ಯಾಜ್ಯ ಸಾಗಾಟದ ಟ್ರ್ಯಾಕ್ಟರ್ ಟ್ರೇಲರ್, ಮನೆ ಮನೆ ತ್ಯಾಜ್ಯ ಸಂಗ್ರಹಣೆಗೆ ಮಿನಿ ಟಿಪ್ಪರ್ ವಾಹನಗಳನ್ನು. ಸಾರ್ವಜನಿಕ ಉಪಯೋಗಕ್ಕೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಲೋಕಾರ್ಪಣೆ ಮಾಡಿದರು.
ಗದಗ ಬೆಟಗೇರಿಯ ನಗರಸಭೆ ಆವರಣದಲ್ಲಿ ಸಚಿವರು ನಗರಸಭೆ ಕಾರ್ಯಾಲಯ ಸನ್ 2024/25 ನೇ ಸಾಲೀನ 15 ನೇ ಹಣಕಾಸು ನಿರ್ಭಂಧಿತ ಯೋಜನೆಯ ಅವನುದಾನದಲ್ಲಿ ತ್ಯಾಜ್ಯ ಸಾಗಾಟದ 4 ಟ್ರ್ಯಾಕ್ಟರ್ ಟ್ರೇಲರ್, ಮನೆ ಮನೆ ತ್ಯಾಜ್ಯ ಸಂಗ್ರಹಣೆಗೆ 6 ಮಿನಿ ಟಿಪ್ಪರ್ ವಾಹನಗಳನ್ನು ಸಾರ್ವಜನಿಕ ಉಪಯೋಗಕ್ಕೆ ಒಟ್ಟು ಅಂದಾಜು 1 ಕೋಟಿ ವೆಚ್ಚದಲ್ಲಿ ಖರೀದಿಸಲಾದ ವಾಹನಗಳನ್ನು ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರು ನಗರಸಭೆಯಿಂದ ಬಿ ಖಾತಾ ಉತಾರಗಳನ್ನು ಸಾಂಕೇತಿಕವಾಗಿ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ, ಎಸ್ ಎನ್ ಬಳ್ಳಾರಿ, ಸಿದ್ದು ಪಾಟೀಲ, ಪ್ರಭು ಬುರಬುರೆ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ ಸೇರಿದಂತೆ ನಗರಸಭೆ ಸದಸ್ಯರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP