ಕಲಬುರಗಿ, 25 ಮೇ (ಹಿ.ಸ.) :
ಆ್ಯಂಕರ್ : ಈ ಹಿಂದೆ ಬಳ್ಳಾರಿಯಲ್ಲಿ ಅಪಾರ ಗಣಿ ಹಣದಿಂದ ಇಡೀ ಬಳ್ಳಾರಿಯನ್ನು ರಿಪಬ್ಲಿಕ್ ಮಾಡಿ ಜನರ ನೆಮ್ಮದಿ ಹಾಳು ಮಾಡಿದ್ದ ಬಿಜೆಪಿ ಪಕ್ಷದ ನಾಯಕರು ಕಲಬುರಗಿ ರಿಪಬ್ಲಿಕ್ ಆಗಿದೆ ಎಂದರೆ ಜನ ನಂಬುತ್ತಾರೆಯೇ ಎಂದು ವೈದ್ಯಕೀಯ ಶಿಕ್ಷಣ, ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಪ್ರಶ್ನಿಸಿದ್ದಾರೆ.
ಕಲಬುರಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಾಯಕರು ಕಲಬುರಗಿಗೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರಿಪಬ್ಲಿಕ್ ಆಫ್ ಕಲಬುರಗಿ ಆಗಿದೆ ಎಂದರೆ ರಿಪಬ್ಲಿಕ್ ಆಗುತ್ತದಯಾ, ಕಲಬುರಗಿ ಜಿಲ್ಲೆಯ ಜನತೆಗೆ ಗೊತ್ತು ಕಾಂಗ್ರೆಸ್ ಇತಿಹಾಸ ಏನು ಅಂತಾ . ನಾವು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಿದ್ದೆವೆ ಹೊರತು ರಿಪಬ್ಲಿಕ್ ಮಾಡಿಲ್ಲ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ರಾಮುಲು ಇಲ್ಲಿ ಬಂದು ರಿಪಬ್ಲಿಕ್ ಆಪ್ ಕಲಬುರಗಿ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ವಿರುದ್ದ ಬಿಜೆಪಿ ನಾಲ್ಕು ಬಾರಿ ಪ್ರತಿಭಟನೆ ನಡೆಸಿದೆ. ಬಿಜೆಪಿಯವರ ಪ್ರತಿಭಟನೆಗಳು ಹಾಸ್ಯಸ್ಪದವಾಗಿವೆ. ಪ್ರಿಯಾಂಕ್ ಕಂಡರೆ ಬಿಜೆಪಿಗೆ ಭಯ ಉಂಟಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa