ಗದಗ, 24 ಮೇ (ಹಿ.ಸ.) :
ಆ್ಯಂಕರ್ : ಗದಗ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ್ ಮಿಷನ್ 2.0 ರ ಅಡಿಯಲ್ಲಿ ಐಇಸಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಘಟಕದಡಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಕುರಿತು ನಗರ ಸ್ಥಳೀಯ ಮಟ್ಟದಲ್ಲಿ ವಿವಿಧ ಬಗೆಯ ಚಟುವಟಿಕೆಗಳನ್ನು ಕೈಗೊಳ್ಳಲು ನಲ್ಮ ಡೇ ಯೋಜನೆಯ ಸ್ವಸಹಾಯ ಸದಸ್ಯರುಗಳನ್ನು ಕಮ್ಯುನಿಟಿ ಮೊಬೆಲೈಜರ್ ಹುದ್ದೆಗೆ ಮಾಸಿಕ ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆದುಕೊಳ್ಳಲು ಅವಕಾಶವಿದೆ.
ಅಭ್ಯರ್ಥಿಯು 18-45 ವರ್ಷ ವಯೋಮಾನದವರಾಗಿರಬೇಕು, ನಲ್ಮಡೇ ಯೋಜನೆಯ ಸ್ವಸಹಾಯ ಸಂಘದ ಸಕ್ರೀಯ ಸದಸ್ಯರಾಗಿರಬೇಕು.
ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲಾತಿಯೊಂದಿಗೆ ಜೂನ್ 16 ರ ಸಂಜೆ 5 ಗಂಟೆಯೊಳಗಾಗಿ ನಿಗದಿತ ಅರ್ಜಿ ನಮೂನೆ ಪಡೆದು ಮಾಹಿತಿಯನ್ನು ಪೌರಾಯುಕ್ತರು ಗದಗ ಬೆಟಗೇರಿ ನಗರಸಭೆ ಗದಗ ರವರ ವಿಳಾಸಕ್ಕೆ ದ್ವಿಪ್ರತಿಯಲ್ಲಿ ಸಲ್ಲಿಸತಕ್ಕದ್ದು.
ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಗದಗ ಬೆಟಗೇರಿ ನಗರಸಭೆ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / Lalita MP