ಮುನಿರಾಬಾದ್ : ಎಂ.ಎಸ್.ಟಿ.ಸಿ. ಘಟಕ,ಅನುಪಯುಕ್ತ ಟೆಂಪೊ ಟ್ರಾವೆಲರ್ ವಾಹನ ಇ-ಹರಾಜು
ಮುನಿರಾಬಾದ್, 23 ಮೇ (ಹಿ.ಸ.) : ಆ್ಯಂಕರ್ : ಕೆ.ಎಸ್.ಆರ್.ಪಿ. ತರಬೇತಿ ಶಾಲೆ, ಮುನಿರಾಬಾದ್ ಘಟಕಕ್ಕೆ ಸೇರಿದ ಅನುಪಯುಕ್ತ ವಾಹನವನ್ನು ಎಂ.ಎಸ್.ಟಿ.ಸಿ. ಅಮಿಟೆಡ್ ಮೂಲಕ ಇ-ಹರಾಜು ಮಾಡಲಾಗುತ್ತಿದೆ. ಕೆ.ಎಸ್.ಆರ್.ಪಿ. ತರಬೇತಿ ಶಾಲೆ, ಮುನಿರಾಬಾದ್ ಘಟಕಕ್ಕೆ ಸೇರಿದ ವಾಹನ ಸಂಖ್ಯೆ ಕೆ.ಎ 1, ಜಿ 397
ಮುನಿರಾಬಾದ್ : ಎಂ.ಎಸ್.ಟಿ.ಸಿ. ಘಟಕ,ಅನುಪಯುಕ್ತ ಟೆಂಪೊ ಟ್ರಾವೆಲರ್ ವಾಹನ ಇ-ಹರಾಜು


ಮುನಿರಾಬಾದ್, 23 ಮೇ (ಹಿ.ಸ.) :

ಆ್ಯಂಕರ್ : ಕೆ.ಎಸ್.ಆರ್.ಪಿ. ತರಬೇತಿ ಶಾಲೆ, ಮುನಿರಾಬಾದ್ ಘಟಕಕ್ಕೆ ಸೇರಿದ ಅನುಪಯುಕ್ತ ವಾಹನವನ್ನು ಎಂ.ಎಸ್.ಟಿ.ಸಿ. ಅಮಿಟೆಡ್ ಮೂಲಕ ಇ-ಹರಾಜು ಮಾಡಲಾಗುತ್ತಿದೆ.

ಕೆ.ಎಸ್.ಆರ್.ಪಿ. ತರಬೇತಿ ಶಾಲೆ, ಮುನಿರಾಬಾದ್ ಘಟಕಕ್ಕೆ ಸೇರಿದ ವಾಹನ ಸಂಖ್ಯೆ ಕೆ.ಎ 1, ಜಿ 3978 (ಏಂ-01-ಉ-3978) ವಾಹನ ತಯಾರಿಕೆ ವರ್ಷ 2003 ಆಗಿದ್ದು, ಈ ಅನುಪಯುಕ್ತ ಪೊಲೀಸ್ ವಾಹನವನ್ನು ಭಾರತದ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಸಂಸ್ಥೆಯಾದ ಎಂ.ಎಸ್.ಟಿ.ಸಿ. ಅಮಿಟೆಡ್. ನಂ: 19/5, 3ನೇ ಮಹಡಿ, ಕರೀಂ ಟವರ್, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು-52 ರವರ ಮೂಲಕ ವಿಲೇವಾರಿ ಮಾಡುವುದರಿಂದ ಆಸಕ್ತಿ ಇರುವ ಬಿಡ್-ದಾರರು ಮೆಃ ಎಂ.ಎಸ್.ಟಿ.ಸಿ. ಲಿಮಿಟೆಡ್ ನಲ್ಲಿ ನೋಂದಾಯಿಸಿಕೊಂಡು (www.mistcindia.co.in) ಮೇ. 27 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ನಡೆಯುವ ಇ-ಹರಾಜುವಿನಲ್ಲಿ ಷರತ್ತುಗಳಿಗೆ ಒಳಪಟ್ಟು ಬಿಡ್ ನಲ್ಲಿ ಭಾಗವಹಿಸಬಹುದಾಗಿದೆ.

ಇ-ಹರಾಜಿನ ಷರತ್ತು ಮತ್ತು ನಿಬಂಧನೆಗಳನ್ನು ಎಂ.ಎಸ್.ಟಿ.ಸಿ. ಪೆÇೀರ್ಟಲ್ ನಲ್ಲಿ ತಿಳಿದು ನಂತರ ಇ-ಂuಛಿಣioಟಿ ನಲ್ಲಿ ಭಾಗವಹಿಸಬೇಕು. ಯಾವುದೇ ನಿಬಂಧನೆಗಳನ್ನು ತಿಳಿಯದೇ ಭಾಗವಹಿಸಿ ನಂತರ ತಪ್ಪೆಸಗಿದಲ್ಲಿ ಅದಕ್ಕೆ ಮುನಿರಾಬಾದನ ಕೆ.ಎಸ್.ಆರ್.ಪಿ., ತರಬೇತಿ ಶಾಲೆಯ ಪ್ರಾಂಶುಪಾಲ ಯಾವುದೇ ಜವಾಬ್ದಾರರಲ್ಲ. ಷರತ್ತು ಮತ್ತು ನಿಬಂಧನೆಗಳಿಗೆ ಸಂಬಂಧಿಸಿದಂತೆ ಯಾವುದೇ ವಾದ/ವಿವಾದ ಉದ್ಭವಿಸಿದಲ್ಲಿ ಕರ್ನಾಟಕ ರಾಜ್ಯದ ಡಿಜಿ. ಮತ್ತು ಐಜಿಪಿ, ರವರು ನೀಡುವ ನಿರ್ಣಯವೇ ಅಂತಿಮವಾಗಿರುತ್ತದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮುನಿರಾಬಾದನ ಕೆ.ಎಸ್.ಆರ್.ಪಿ. ತರಬೇತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಲು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande