ಭಾರತದ ರಾಜತಾಂತ್ರಿಕ ಸಂವಾದ ಆರಂಭ
ನವದೆಹಲಿ, 22 ಮೇ (ಹಿ.ಸ.) : ಆ್ಯಂಕರ್ : ಭಯೋತ್ಪಾದನೆಯ ವಿರುದ್ಧ ತನ್ನ ನಿಲುವು ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ಭಾರತವು ರಾಜತಾಂತ್ರಿಕ ಸಂವಾದ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಎರಡು ಸಂಸದೀಯ ನಿಯೋಗಗಳು ಜಪಾನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಭೇಟಿ ನೀಡಿವೆ. ಜಪಾನ್‌ಗೆ ಸ
Visit


Visit


ನವದೆಹಲಿ, 22 ಮೇ (ಹಿ.ಸ.) :

ಆ್ಯಂಕರ್ : ಭಯೋತ್ಪಾದನೆಯ ವಿರುದ್ಧ ತನ್ನ ನಿಲುವು ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ಭಾರತವು ರಾಜತಾಂತ್ರಿಕ ಸಂವಾದ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಎರಡು ಸಂಸದೀಯ ನಿಯೋಗಗಳು ಜಪಾನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಭೇಟಿ ನೀಡಿವೆ.

ಜಪಾನ್‌ಗೆ ಸಂಜಯ್ ಕುಮಾರ್ ಝಾ ನೇತೃತ್ವದ ನಿಯೋಗವು ತೆರಳಿ, ವಿದೇಶಾಂಗ ಸಚಿವ ತಕೇಶಿ ಇವಾಯಾ ಅವರನ್ನು ಭೇಟಿ ಮಾಡಿತು. ಆಪರೇಷನ್ ಸಿಂಧೂರ್ ಮತ್ತು ಭಯೋತ್ಪಾದನೆ ವಿರುದ್ಧದ ನಿಲುವು ವಿವರಿಸಲಾಯಿತು. ಈ ನಿಯೋಗವು ಏಷ್ಯಾದ ಐದು ರಾಷ್ಟ್ರಗಳಿಗೆ ಭೇಟಿ ನೀಡಲಿದೆ.

ಇನ್ನೊಂದು ನಿಯೋಗ ಶಿವಸೇನೆಯ ಶ್ರೀಕಾಂತ್ ಶಿಂಧೆ ನೇತೃತ್ವದಲ್ಲಿ ಯುಎಇಗೆ ಭೇಟಿ ನೀಡಿ, ಬಳಿಕ ಆಫ್ರಿಕಾದ ಲೈಬೀರಿಯಾ, ಕಾಂಗೋ ಹಾಗೂ ಸಿಯೆರಾ ಲಿಯೋನ್‌ಗೆ ತೆರಳಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande