ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ವಂಚನೆ : ಕಾರ್ಮಿಕ ಮುಖಂಡರ ಆರೋಪ
ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ವಂಚನೆ : ಕಾರ್ಮಿಕ ಮುಖಂಡರ ಆರೋಪ
ಕೋಲಾರ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.


ಕೋಲಾರ, 0೯ ಮಾರ್ಚ್ (ಹಿ.ಸ) :

ಆ್ಯಂಕರ್ : ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ನೊಂದಾಯಿತ ಸಂದರ್ಭದಲ್ಲಿ ದಾಖಲೆಗಳು ಸರಿ ಇದ್ದರೂ ರದ್ದು ಮಾಡಲಾಗುತ್ತಿದ್ದು ಇದರಿಂದಾಗಿ ನೈಜ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು ಕಾರ್ಮಿಕರ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರವಿದ್ದರೂ ಪ್ರತಿಭಟನೆಗೆ ಸಿದ್ದವಿದ್ದೇವೆ ಎಂದು ಕಾರ್ಮಿಕ ಇಲಾಖೆ ವಿರುದ್ದ ಐ.ಎನ್.ಟಿ.ಯು.ಸಿ(ಇಂಟೆಕ್) ರಾಜ್ಯಾಧ್ಯಕ್ಷ ಡಿ.ಲಕ್ಷ್ಮೀ ವೆಂಕಟೇಶ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಭಾನುವಾರ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐ.ಎನ್.ಟಿ.ಯು.ಸಿ) ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸುವ ಮೂಲಕ ಉದ್ವಾಟನೆ ಮಾಡಿ ಮಾತನಾಡಿದ ಅವರು ಅಧಿವೇಶನ ಮುಗಿದ ತಕ್ಷಣವೇ ರಾಜ್ಯ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಸಂಘಟನೆಯ ಮುಖಂಡರು ಚರ್ಚೆ ನಡೆಸಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲಾಗುತ್ತದೆ ಸಮಸ್ಯೆ ಪರಿಹಾರವಾಗದೇ ಹೋದರೆ ಹೋರಾಟಕ್ಕೆ ಸಿದ್ದರಾಗುವಂತೆ ಕಾರ್ಮಿಕರಿಗೆ ತಿಳಿಸಿದರು.

ಇವತ್ತು ಸಮಾಜದಲ್ಲಿ ಮಹಿಳೆಯರಿಗೆ ಪ್ರಥಮ ಸ್ಥಾನವನ್ನು ನೀಡಲಾಗಿದೆ ಪುರುಷರಷ್ಠೇ ಶಕ್ತಿ ಸಾಮರ್ಥ್ಯವನ್ನು ಹೊಂದಿರುವ ಮಹಿಳೆಯರು ಎಲ್ಲಾ ಕ್ಷೇತ್ರವನ್ನು ನಿಭಾಯಿಸುತ್ತಾರೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಸಹ ಐದು ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಮಹಿಳೆಯರಿಗೆ ನೀಡಲಾಗಿದೆ ಸರ್ಕಾರದ ಉದ್ದೇಶವು ಮಹಿಳೆಯರಿಗೆ ಸೌಲಭ್ಯ ನೀಡಿದರೆ ಸಮರ್ಪಕವಾಗಿ ಬಳಕೆಯಾಗುತ್ತದೆ ಎಂಬುದಾಗಿರುತ್ತದೆ ಎಂದರು.

ಇAಟೆಕ್ ರಾಜ್ಯ ಕಾರ್ಯಾಧ್ಯಕ್ಷ ಹೆಚ್.ಸಿ ಶಾಮಣ್ಣರೆಡ್ಡಿ ಮಾತನಾಡಿ ಹಿಂದಿನಿ0ದಲೂ ಮಹಿಳೆಯರ ಮೇಲೆ ಶೋಷಣೆ ದಬ್ಬಾಳಿಕೆ ನಡೆಯುತ್ತಲೇ ಇದ್ದು ಇದು ಈಗಲೂ ಮುಂದುವರಿದುಕೊAಡು ಹೋಗಿದೆ ಇದು ನಿಲ್ಲಬೇಕು ಇದಕ್ಕೆ ಜಾಗೃತಿ ಮುಖ್ಯವಾಗಿದೆ ಕಾಂಗ್ರೆಸ್ ಸರ್ಕಾರವು ಮಹಿಳೆಯರು ಮೇಲಿನ ಶೋಷಣೆ ತಪ್ಪುವಂತೆ ಮಾಡುವ ಉದ್ದೇಶದಿಂದ ಐದು ಗ್ಯಾರಂಟಿ ಯೋಜನೆಗಳನ್ನು ನೀಡಲಾಗಿದೆ ಸರ್ಕಾರದ ವಿರುದ್ದ ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳು ಸಹ ಅದಕ್ಕೆಲ್ಲ ತಲೆಕೊಡಿಸದೇ ಸರ್ಕಾರವು ನಮ್ಮ ಪರವಾಗಿ ಇದ್ದಾಗ ನಾವು ಸರ್ಕಾರದ ಪರವಾಗಿ ಇರಬೇಕಾಗುತ್ತದೆ ಎಂದರು.

ಇ0ಟೆಕ್ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಬಾಲಮ್ಮ ಮಾತನಾಡಿ ಮಹಿಳಾ ಪರವಾದ ಯೋಜನೆಗಳ ಜೊತೆಗೆ ಕಾನೂನು ಜಾರಿ ಮಾಡುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಬಹುಮುಖ್ಯವಾಗಿದೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ನಿಭಾಯಿಸಲು ಶಕ್ತಿ ಇದ್ದು ರಾಷ್ಟ್ರಪತಿಯಿಂದ ಹಿಡಿದು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಅಧಿಕಾರಿಯ ಹಾದಿಯಿಂದ ಗೃಹಿಣಿಯಾಗಿ ಯಶಸ್ಸು ಗಳಿಸಿದ್ದಾಳೆ ಸಮಾಜದಲ್ಲಿ ಸ್ತ್ರೀ ಶಕ್ತಿ ಸಂಘಗಳ ಮೂಲಕ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗಿದ್ದಾರೆ ಎಂದರು.

ಇ0ಟೆಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊನ್ನೇನಹಳ್ಳಿ ಯಲ್ಲಪ್ಪ ಮಾತನಾಡಿ ರಾಜ್ಯದಲ್ಲಿ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರಿಗೆ ಸರ್ಕಾರ ಭದ್ರತೆ ಒದಗಿಸಬೇಕು ಕಾರ್ಮಿಕರು ಅರ್ಜಿ ಸಲ್ಲಿಸಿದ ಕೂಡಲೇ ಪರಿಶೀಲನೆ ಮಾಡಿ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಬೇಕು ಸರ್ಕಾರ ಕಾರ್ಮಿಕರನ್ನು ನಿರ್ಲಕ್ಷ್ಯ ವಹಿಸಬಾರದು ಕಟ್ಟಡ ಕಾರ್ಮಿಕರು ಸಹ ಕಡ್ಡಾಯವಾಗಿ ಕಾರ್ಡ್ ಮಾಡಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯುಂತಾಗಬೇಕು ಇದಕ್ಕೆ ಪ್ರತಿಭಟನೆಯ ಮೂಲಕ ತಮ್ಮ ಹಕ್ಕನ್ನು ಕೇಳಬೇಕಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಉಪಾಧ್ಯಕ್ಷ ಎಲ್.ಎ.ಮಂಜುನಾಥ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಕೋಲಾರ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಶಿಲ್ಪಾ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಮಹಿಳಾ ಜಿಲ್ಲಾ ಅಧ್ಯಕ್ಷೆ ಸರಸ್ವತಮ್ಮ ವಹಿಸಿದ್ದರು ಕೋಲಾರ ಜಿಲ್ಲಾ ಕಟ್ಟಡ ಕಾರ್ಮಿಕ ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ಸಿದ್ದನಹಳ್ಳಿ ಸೀನಪ್ಪ, ಗೋಪಾಲಪ್ಪ, ಹೊನ್ನೇನಹಳ್ಳಿ ಮುರಳೀಧರ್, ರಾಜಪ್ಪ, ಆದಿ ನಾರಾಯಣಪ್ಪ, ಚಲಪತಿ, ಚಂದ್ರಪ್ಪ, ವೆಂಕಟೇಶ್, ಕೈಷ್ಣಪ್ಪ, ಚಂದ್ರಪ್ಪ, ಈಶ್ವರಪ್ಪ, ಮುನಿರಾಜು, ಲಕ್ಷ್ಮೀ, ಯಲ್ಲಮ್ಮ, ಲಕ್ಷ್ಮೀ ಕಾಂತಮ್ಮ, ಸರೀತಮ್ಮ, ಕಲಾವತಮ್ಮ, ಭುವನೇಶ್ವರಿ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.

ಚಿತ್ರ : ಕೋಲಾರ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande