ಹುಬ್ಬಳ್ಳಿ, 09 ಮಾರ್ಚ್ (ಹಿ.ಸ.) :
ಆ್ಯಂಕರ್ : ಗ್ರಾಮೀಣ ಪ್ರದೇಶದಲ್ಲಿನ ಸಹಕಾರಿ ಸಂಘಗಳು ಜನರ ಹಿತ ಕಾಪಾಡುವ ಜೊತೆಗೆ ಐಕ್ಯತೆಗಾಗಿ ಕಾರ್ಯನಿರ್ವಹಿಸಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗಂಗಣ್ಣ ದುಂದೂರ ಹಾಗೂ ಉಪಾಧ್ಯಕ್ಷರಾಗಿರುವ ಲಲಿತಾ ಶಂಕರಗೌಡ ಪಾಟೀಲ ಅವರನ್ನ ಸತ್ಕರಿಸಿ ಮಾತನಾಡಿದ ಅವರು, ಪದಾಧಿಕಾರಿಗಳಿಗೆ, ಸಂಘದ ಅಭಿವೃದ್ಧಿಯ ಜೊತೆಗೆ ರೈತಾಪಿ ಕುಲದ ಏಳಿಗೆಗಾಗಿ ಶ್ರಮ ವಹಿಸಿ ಎಂದು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa