ಹಾಸನ, 09 ಮಾರ್ಚ್ (ಹಿ.ಸ.) :
ಆ್ಯಂಕರ್ : ಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕಳೆದುಕೊಳ್ಳುವ ಮುಂಚೆ, ಜನರಿಗೆ ಕುಡಿಯುವ ನೀರು, ಭೂಮಿಗೆ ನೀರು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸೂರು, ದುಡಿಮೆಗೆ ಒಳ್ಳೆಯ ಬೆಲೆ. ಬದುಕಿನಲ್ಲಿ ಸಾಧನೆ ಮಾಡಲು ಅವಕಾಶ ಮಾಡಿಕೊಳ್ಳದಿದ್ದರೆ ಪ್ರಜಾಪ್ರಭುತ್ತದಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಭಾನುವಾರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೆಶಿವರ ಗ್ರಾಮದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಹುಟ್ಟೂರಿನಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕಿನ ಸಾಕ್ಷಾತ್ಕಾರಕ್ಕೆ ಎರಡು ವಿಷಯ ಬಹಳ ಮುಖ್ಯ ಒಂದು ಜ್ಞಾನ, ಇನ್ನೊಂದು ಧ್ಯಾನ. ಇವೆರಡರ ಸಾಧನೆಯನ್ನು ನಮ್ಮೆಲ್ಲರ ಅಭಿಮಾನದ ಹಲವಾರು ಪ್ರಶಸ್ತಿಗೆ ಪಾತರಾಗಿರುವ ಎಸ್.ಎಲ್. ಭೈರಪ್ಪ ಒಲಿಸಿಕೊಂಡಿದ್ದಾರೆ. ಬದುಕಿನಲ್ಲಿ ನಮ್ಮ ಮುಗ್ಧತೆ ಕಾಪಾಡಿಕೊಂಡು ಹೋಗುವುದು ಬಹಳ ಕಷ್ಟ ಮಕ್ಕಳಿದ್ದಾಗ ನಮ್ಮ ಮುಖ ಮುಗ್ಧತೆಯಿಂದ ಕೂಡಿರುತ್ತದೆ. ಯಾಕೆಂದರೆ ಹೃದಯ ಮುಗ್ಧತೆಯಿಂದ ಕೂಡಿರುತ್ತದೆ. ದೊಡ್ಡವರಾದ ಮೇಲೆ ಆಕಾರ ವಿಕಾರ ಆಗಿರುತ್ತದೆ. ಭೈರಪ್ಪರ ಮುಗ್ಧತೆ ಈಗಲೂ ಇದೆ. ಅವರದು ಮಗುವಿನ ಮುಗ್ಧತೆ ಇದೆ. ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವುದು ಬಹಳ ದೊಡ್ಡ ಸವಾಲು. ರಾಜಕಾರಣಿಗಳಿಗೆ ಆತ್ಮಸಾಕ್ಷಿ ಇರುವುದಿಲ್ಲ, ಬೈರಪ್ಪನವರು ಬದುಕನ್ನು ಅನುಭವಿಸಿ ಬರಹ ಬರೆದಿದ್ದಾರೆ. ಬಹರದಿಂದ ಬದುಕನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa