ಕೋಲಾರ, 0೯ ಮಾರ್ಚ್ (ಹಿ.ಸ) :
ಆ್ಯಂಕರ್ : ಡ್ರಗ್ಸ್ ಮುಕ್ತ ಕರ್ನಾಟಕ ಮತ್ತು ಮಾದಕ ವಸ್ತುಗಳ ವಿರುದ್ದ ಜನಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಾದ್ಯಂತ ಮಾ.೦೯ ಭಾನುವಾರದಂದು “ಕರ್ನಾಟಕ ಪೊಲೀಸ್ ರನ್” ೫ಕೆ/೧೦ಕೆ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” “ಫಿಟ್ನೆಸ್ ಫಾರ್ ಆಲ್” ಹಾಗೂ “ಡ್ರಗ್ಸ್ ಮುಕ್ತ ಕರ್ನಾಟಕ” ವಿಷಯದಡಿ ಕೆಜಿಎಫ್‌ನಲ್ಲಿ ೫ಕೆ ಮ್ಯಾರಥಾನ್ ಓಟವು ಯಶಸ್ವಿಯಾಗಿ ನಡೆಯಿತು.
ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಹಾಗೂ ಎಸ್‌ಬಿಐ ಬ್ಯಾಂಕ್ ಸಹಭಾಗಿತ್ವದಲ್ಲಿ ಭಾನುವಾರ ಬೆಳಿಗ್ಗೆ ೬.೩೦ ಗಂಟೆಗೆ ರಾಬರ್ಟ್ಸನ್‌ಪೇಟೆ ನಗರಸಭೆ ಮೈದಾನದಿಂದ ಪ್ರಾರಂಭವಾದ ೫ಕೆ ಓಟವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು & ಪ್ರಧಾನ ಜೆಎಂಎಫ್‌ಸಿ ನ್ಯಾಯಾಧೀಶರಾದ ಶ್ರೀ.ಮುಜಾಫರ್ ಎ. ಮಾಂಜರಿ, ಅವರು ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಶ್ರೀ.ಮುಜಾಫರ್ ಎ. ಮಾಂಜರಿ ಮಾತನಾಡಿ, ಮಾದಕ ದ್ರವ್ಯ ಬಳಕೆ ಅಪಾಯಕಾರಿಯಾಗಿದ್ದು, ಇದು ಮಾರಣಾಂತಿಕ ಕಾಯಿಲೆಗೆ ದೂಡುವ ಜತೆಗೆ ಮುನುಷ್ಯರನ್ನು ಅಧೀರರನ್ನಾಗಿಸುತ್ತದೆ. ಸರ್ಕಾರ, ಸಂಘ ಸಂಸ್ಥೆಗಳು, ಜನರು ಒಂದಾಗಿ ಇದರ ವಿರುದ್ದ ಸಮರ ಸಾರಬೇಕು. ಭಾರತದ ಜನರು, ಸಮಾಜವು ಎಚ್ಚರಿಕೆಯಿಂದ ಮಾದಕ ವಸ್ತುಗಳನ್ನು ತೊಲಗಿಸಲು ಯತ್ನಿಸಬೇಕು ಎಂದು ಹೇಳಿದರು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿರುವುದರಿಂದ, ಪ್ರತಿಯೊಬ್ಬ ವಿದ್ಯಾರ್ಥಿಯು ಮಾದಕ ದ್ರವ್ಯ, ಮಾದಕ ವಸ್ತುಗಳಿಂದ ದೂರ ಉಳಿಯಬೇಕು. ಮಾದಕ ವ್ಯಸನಿಗಳಾಗಬಾರದು. ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳನ್ನು ಬಳಸಬಾರದೆಂದರು. ಮಾದಕ ದ್ರವ್ಯ ಹಾಗೂ ಮಾದಕ ವಸ್ತುಗಳ ಮಾರಾಟ, ಬಳಸುವಿಕೆಯನ್ನು ತಡೆಯುವಲ್ಲಿ ಯುವಜನತೆಯು ಪ್ರಮುಖ ಪಾತ್ರ ವಹಿಸಿ, ಮಾದಕ ವಸ್ತುಗಳ ಮುಕ್ತ ಸಮಾಜವನ್ನು ನಿರ್ಮಿಸಲು ಶ್ರೀ.ಮುಜಾಫರ್ ಎ. ಮಾಂಜರಿ ಅವರು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾ0ತರಾಜು ಮಾತನಾಡಿ, ಸಾಕಷ್ಟು ಯುವಜನತೆ ಮಾದಕ ವಸ್ತುಗಳಿಗೆ ಆಕರ್ಷಿತರಾಗುವ ಸಾಧ್ಯತೆ ಇದ್ದು ಹಾಗೂ ಇದನ್ನು ಮಾದಕ ವಸ್ತು ಕಳ್ಳಸಾಗಣೆದಾರರು ದುರ್ಬಳಕೆ ಮಾಡಿಕೊಂಡು ಇಂತಹ ವಸ್ತುಗಳನ್ನು ಕಳ್ಳಸಾಗಣೆ ಮಾಡಿ ದೇಶದ ಯುವ ಶಕ್ತಿಗೆ ಮಾರಕವಾಗುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಗೆ ಅರಿವು ಮೂಡಿಸುವುದು ಅವಶ್ಯಕವಾಗಿರುತ್ತದೆ. ಮಾದಕ ದ್ರವ್ಯ ಬಳಕೆ ಹಾಗೂ ಕಳ್ಳಸಾಗಣೆ ಅಂತಾರಾಷ್ಟಿçÃಯ ಸಮಸ್ಯೆಯಾಗಿದ್ದು ಇದರ ನಿರ್ಮೂಲನೆಗೆ ಯುವಕರು ಪಣ ತೊಡಬೇಕು ಎಂದು ಕರೆ ನೀಡಿದರು. ಮಾದಕ ವಸ್ತುಗಳ ವಿರುದ್ದ, ಪೊಲೀಸ್ ಇಲಾಖೆಯು ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವ ಕುರಿತು ಸಮುದಾಯದ ಸಹಭಾಗಿತ್ವದಲ್ಲಿ ಹಲವು ಜನಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಸಮಾಜದಲ್ಲಿ ಮಾದಕ ವಸ್ತುಗಳ ಮಾರಾಟ, ಬಳಕೆಯನ್ನು ತಡೆಗಟ್ಟಲು ಸಾರ್ವಜನಿಕರ ಹಾಗೂ ಯುವಕರ ಸಹಕಾರವು ಪೊಲೀಸ್ ಇಲಾಖೆಗೆ ಅತ್ಯವಶ್ಯಕವಾಗಿದೆ ಎಂದು ಎಸ್‌ಪಿ ಕೆ.ಎಂ.ಶಾAತರಾಜು ಅವರು ತಿಳಿಸಿದರು.
ಮ್ಯಾರಥಾನ್ ಓಟ ರಾಬರ್ಟ್ಸನ್‌ಪೇಟೆ ನಗರಸಭಾ ಮೈದಾನದಿಂದ ಪ್ರಾರಂಭಿಸಿ, ಸೂರಜ್‌ಮಲ್ ವೃತ್ತ, ಡಾ. ಅಂಬೇಡ್ಕರ್ ರಸ್ತೆ, ಉರಿಗಾಂ ರೈಲ್ವೇ ಸ್ಟೇಷನ್, ಎನ್‌ಟಿ-ಬ್ಲಾಕ್, ಮುರುಗನ್ ದೇವಸ್ಥಾನ, ಚಾಂಪಿಯನ್ ಹೈಗ್ರೌಂಡ್, ಕಲ್ಲರೈ ಮೂಲೆ, ಡಾ. ಸಲ್ಡಾನ ಸರ್ಕಲ್ ಮಾರ್ಗವಾಗಿ ನಗರಸಭಾ ಮೈದಾನದಲ್ಲಿ ಸಮಾರೋಪಗೊಂಡಿತು.
ಮ್ಯಾರಥಾನ್ ಓಟದಲ್ಲಿ ಕೆಜಿಎಫ್ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕರಾದ ಮೋಹನ್, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ, ಕೆ.ಜಿ.ಎಫ್ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಲ್. ನರಸಿಂಹಮೂರ್ತಿ,
.
ಚಿತ್ರ : ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಕೆಜಿಎಫ್‌ನಲ್ಲಿ ಪೊಲೀಸ್ ರನ್ ಮ್ಯಾರಥಾನ್ ಓಟ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್