ಕೋಲಾರ, 0೯ ಮಾರ್ಚ್ (ಹಿ.ಸ) :
ಆ್ಯಂಕರ್ : ಡ್ರಗ್ಸ್ ಮುಕ್ತ ಕರ್ನಾಟಕ ಆಂದೋಲನದ ಅಂಗವಾಗಿ ಭಾನುವಾರ ಕೋಲಾರದಲ್ಲಿ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಐದು ಕಿ.ಮೀಟರ್ ಓಟ ನಡೆಯಿತು.
ಓಟದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಾರ್ಯಕ್ರಮದ ಪ್ರಾಯೋಜಕರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಮತ್ತು ಸಿಬ್ಬಂದಿ, ಕ್ರೀಡಾಪಟುಗಳು, ಎನ್.ಸಿ.ಸಿ. ಕ್ಯಾಡೆಟ್‌ಗಳು ಭಾಗವಹಿಸಿದ್ದರು. ಐದು ಕಿ.ಮೀ. ಓಟಕ್ಕೆ ಕೋಲಾರ ಎಸ್.ಪಿ. ಬಿ ನಿಖಿಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋಲಾರ ಪ್ರಾದೇಶಿಕ ವ್ಯವಸ್ಥಾಪಕರಾದ ಬಾಬು ಸೋಮಪ್ಪ ಚಾಲನೆ ನೀಡಿದರು.
ಕೋಲಾರ ಜಿಲ್ಲಾ ಎಸ್.ಪಿ. ನಿಖಿಲ್.ಬಿ ಮಾತನಾಡಿ ಡ್ರಕ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದು ಓಟದ ಘೋಷ ವಾಕ್ಯ ಮತ್ತು ಉದ್ದೇಶವಾಗಿದೆ ಎಂದು ತಿಳಿಸಿದರು.
ಸ್ಟೇಟ್ ಬ್ಯಾಂಕ್ ಇಂಡಿಯಾ ಕೋಲಾರ ಪ್ರಾದೇಶಿಕ ವ್ಯವಸ್ಥಾಪಕ ಬಾಬು ಸೋಮಪ್ಪ ಮಾತನಾಡಿ ಬದಲಾದ ಜೀವನ ಶೈಲಿಯಿಂದ ಆರೋಗ್ಯ ಹದಗಡುತ್ತಿದೆ. ಆಹಾರವೇ ವಿಷವಾಗುತ್ತಿದೆ. ಯುವಕರು ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳ ವ್ಯÀನಿಗಳಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಚಿತ್ರ : ಕೋಲಾರದಲ್ಲಿ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ನಡೆದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಪದಕಗಳನ್ನು ನೀಡಿ ಗೌರವಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್