ಜಿಲ್ಲಾಮಟ್ಟದ ಉದ್ಯೋಗಮೇಳ ಯಶಸ್ವಿ:ದಿವ್ಯ ಪ್ರಭು
ಧಾರವಾಡ, 09 ಮಾರ್ಚ್ (ಹಿ.ಸ.) : ಆ್ಯಂಕರ್ : ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಇಂದು ಕೆಸಿಡಿ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಯಶಸ್ವಿಯಾಗಿದ್ದು, ಉದ್ಯೋಗದಾತರಿಂದ ಮತ್ತು ಉದ್ಯೋಗ ಆಕಾಂಕ್ಚಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು
Job fair


ಧಾರವಾಡ, 09 ಮಾರ್ಚ್ (ಹಿ.ಸ.) :

ಆ್ಯಂಕರ್ : ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಇಂದು ಕೆಸಿಡಿ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಯಶಸ್ವಿಯಾಗಿದ್ದು, ಉದ್ಯೋಗದಾತರಿಂದ ಮತ್ತು ಉದ್ಯೋಗ ಆಕಾಂಕ್ಚಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಉದ್ಯೋಗ ಮೇಳದಲ್ಲಿ ಸಂದರ್ಶನ ನೀಡಿದ್ದ 5,821 ಅಭ್ಯರ್ಥಿಗಳ ಪೈಕಿ 3,149 ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳು ಶಾರ್ಟ ಲಿಸ್ಟ್ ಮಾಡಿಕೊಂಡು ಆಫರ್ ಲೇಟರ್ ನೀಡಿವೆ. ಮತ್ತು 532 ಉದ್ಯೋಗ ಆಕಾಂಕ್ಷಗಳಿಗೆ ಕಂಪನಿ, ಕೈಗಾರಿಕೆಗಳು ನೇಮಕಾತಿ ಪತ್ರ ನೀಡಿವೆ. ಒಟ್ಟಾರೆಯಾಗಿ ಉದ್ಯೋಗಕ್ಕಾಗಿ ಶಾರ್ಟ ಲಿಸ್ಟ್ ಆಗಿರುವ ಮತ್ತು ನೇಮಕಾತಿ ಆದೇಶ ಪಡೆದಿರುವವರು ಆಗಿದ್ದು, ಶೇ.64 ಪ್ರತಿ ಶತ ಸಾಧನೆ ಆಗಿದೆ. ಉದ್ಯೋಗ ಮೇಳಕ್ಕೆ ನೋಂದಾಯಿತರಾಗಿದ್ದ ಸುಮಾರು 3000 ಜನ ಉದ್ಯೋಗ ಆಕಾಂಕ್ಷಿಗಳು, ಸಂದರ್ಶನಕ್ಕೆ ಹಾಜರಾಗದೆ, ಅವರ ಪಾಲಕರೊಂದಿಗೆ ಉದ್ಯೋಗಮೇಳಕ್ಕೆ ಭೇಟಿ ನೀಡಿ, ಕೈಗಾರಿಕೆ, ಕಂಪನಿಗಳಲ್ಲಿನ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande