ಜಾನಪದ ಸಂಗೀತವು ಸಂಬ0ಧಗಳನ್ನು ಗಟ್ಟಿಗೊಳಿಸುತ್ತದೆ : ಗುರುಪ್ರಸಾದ್
ಜಾನಪದ ಸಂಗೀತವು ಸಂಬ0ಧಗಳನ್ನು ಗಟ್ಟಿಗೊಳಿಸುತ್ತದೆ : ಗುರುಪ್ರಸಾದ್
ಕೋಲಾರ ಜಿಲ್ಲೆಯ ಮಾಲೂರು ಮಾರುತಿ ಬಡಾವಣೆಯಲ್ಲಿ ಕನ್ನಡ ಸಂಗೀತ ಕಲಾ ವೈಭವ ಕಾರ್ಯಕ್ರಮ ನಡೆಯಿತು.


ಕೋಲಾರ, ಮಾರ್ಚ್ 0೯ (ಹಿ.ಸ) :

ಆ್ಯಂಕರ್ : ಜಾನಪದ ಸಂಗೀತವು ಸಂಬ0ಧಗಳನ್ನು ಗಟ್ಟಿಗೊಳಿಸುವ ಸುಂದರ ಮತ್ತು ಅರ್ಥಪೂರ್ಣ ಸಾಹಿತ್ಯವಿರುತ್ತದೆ. ಸೋದರತ್ವ, ಪೋಷಕರ ಮಹತ್ವ, ಗೆಳೆತನ, ಪ್ರೀತಿ ಹೀಗೆ ಹಲವಾರು ಮಜಲುಗಳನ್ನು ನಾವು ಜನಪದದಲ್ಲಿ ಕಾಣಬಹುದು. ಮರೆತ ಹಳೆಯ ನೆನಪುಗಳನ್ನು ಕಣ್ಣಿಗೆ ಕಟ್ಟಿದಂತೆ ಗಾಯಕರು ಹಾಡಿದರು ಎಂದು ದಲಿತ ಕ್ರಿಯಾ ಸಮಿತಿಯ ರಾಜ್ಯ ಸಂಚಾಲಕ ಡಿ.ಎಂ. ಗುರುಪ್ರಸಾದ್ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಬೆಂಗಳೂರು, ಗಾನಸುಧಾ ಸಾಂಸ್ಕೃತಿಕ ಕಲಾ ಸಂಘ ಜಯಮಂಗಲ ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಮಾಲೂರು ಮಾರುತಿ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಂಗೀತ ಕಲಾ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗಾನಸುಧಾ ಸಾಂಸ್ಕೃತಿಕ ಕಲಾ ಸಂಘ ಅಧ್ಯಕ್ಷ ಕೆ. ಗೌತಮ್ ಮಾತನಾಡಿ ಸಂಗೀತವು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಇದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದರಲ್ಲೂ ನಮ್ಮ ಹಳ್ಳಿ ಸೊಗಡಿನ ಜಾನಪದ ಸಂಗೀತವು ಹಲವಾರು ಪ್ರಾಕಾರಗಳಿದ್ದು, ಜಾನಪದ ಸಂಗೀತ, ಜಾನಪದ ನೃತ್ಯವು ಹಲವಾರು ಕವಲುಗಳನ್ನು ಹೊಂದಿದ್ದು, ಹಲವಾರು ಕಲಾವಿದರು ಜೀವನೋಪಾಯಕ್ಕೂ ಆಧಾರವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾ ತಂಡಗಳಿಗೆ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಕಲಾವಿದರು ಬದುಕು ಕಟ್ಟಿಕೊಳ್ಳಲು ಮತ್ತು ಕಲೆಯನ್ನು ಉಳಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬೇತಮಂಗಲ ಸಿ.ನಾರಾಯಣಸ್ವಾಮಿ ಮತ್ತು ತಂಡದಿAದ ಜಾನಪದ ಸಂಗೀತ, ಈಶ್ವರಪ್ಪ ಮತ್ತು ತಂಡದಿAದ ಸುಗಮ ಸಂಗೀತ, ಶ್ರಾವಂತಿ ಮತ್ತು ತಂಡದಿAದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ತಬಲ ಸಹಕಾರ ಪೃಥ್ವಿರಾಜ್ ಮತ್ತು ಕೀಬೋರ್ಡ್ ಸಹಕಾರವನ್ನು ಹಲಿಮಂಗಲ ಶಿವಕುಮಾರ್ ನಡೆಸಿಕೊಟ್ಟರು.

ಜಗದೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಎಪಿಎಂಸಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಪ್ರದೀಪ್‌ರೆಡ್ಡಿ, ಸಂಗೀತ ಶಿಕ್ಷಕಿ ಡಾ. ಅರುಣಾ, ಎಂ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲೆಯ ಮಾಲೂರು ಮಾರುತಿ ಬಡಾವಣೆಯಲ್ಲಿ ಕನ್ನಡ ಸಂಗೀತ ಕಲಾ ವೈಭವ ಕಾರ್ಯಕ್ರಮ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande