ಸಾಸರವಾಡದಲ್ಲಿ ಜಾತ್ರೆ ಸಂಭ್ರಮ
ಗದಗ, 09 ಮಾರ್ಚ್ (ಹಿ.ಸ.) : ಆ್ಯಂಕರ್ : ಅದು ತುಂಗಭದ್ರಾ ನದಿಯ ನಡುಗಡ್ಡೆ ಪ್ರದೇಶ. ಹಸಿರು ಕಾನನ ಮಧ್ಯದಲ್ಲಿ ಜಾತ್ರೆ ಸಂಭ್ರಮ ಜೋರಾಗಿತ್ತು. ಋಷಿ ಮುನಿಗಳ ತಪಸ್ಸು ಮಾಡಿದ ನೆಲದಲ್ಲಿ ಭಕ್ತಿಯ ಪರಾಕಾಷ್ಠೆಯಲ್ಲಿ ಭಕ್ತರು ಮುಳುಗಿ ಹೋಗಿದ್ದರು. ಭಕ್ತರು ಕೆನ್ನೆಗೆ ದಾರ ಹಾಗೂ ಶಸ್ತ್ರ ಹಾಕಿಕೊಂಡು ಭಕ್ತಿಯ ಪ
ಫೋಟೋ


ಫೋಟೋ


ಗದಗ, 09 ಮಾರ್ಚ್ (ಹಿ.ಸ.) :

ಆ್ಯಂಕರ್ : ಅದು ತುಂಗಭದ್ರಾ ನದಿಯ ನಡುಗಡ್ಡೆ ಪ್ರದೇಶ. ಹಸಿರು ಕಾನನ ಮಧ್ಯದಲ್ಲಿ ಜಾತ್ರೆ ಸಂಭ್ರಮ ಜೋರಾಗಿತ್ತು. ಋಷಿ ಮುನಿಗಳ ತಪಸ್ಸು ಮಾಡಿದ ನೆಲದಲ್ಲಿ ಭಕ್ತಿಯ ಪರಾಕಾಷ್ಠೆಯಲ್ಲಿ ಭಕ್ತರು ಮುಳುಗಿ ಹೋಗಿದ್ದರು. ಭಕ್ತರು ಕೆನ್ನೆಗೆ ದಾರ ಹಾಗೂ ಶಸ್ತ್ರ ಹಾಕಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು. ಮತ್ತೊಂದೆಡೆ ಪುರುವಂತರು ಹಾಗೂ ಭಕ್ತ ಸಮೂಹ ಅಗ್ನಿಕುಂಡದಲ್ಲಿ ಹಾಯ್ದು ಭಕ್ತಿಯ ಉನ್ಮಾದಲ್ಲಿ ತೇಲಿದರು. ಪೃಕೃತಿಯ ಸೌಂದರ್ಯದ ಸೊಬಗಿನ ಮಧ್ಯದಲ್ಲಿ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿತ್ತು.

ಹಸಿರು ಸೊಬಗಿನ ಮಧ್ಯದಲ್ಲಿ ಭಕ್ತಿಯ ಪರಾಕಾಷ್ಠೆ. ಬಾಯಲ್ಲಿ ಶಾಸ್ತ್ರ ಹಾಕಿ ಕುಣಿಯುತ್ತಿರುವ ಭಕ್ತರು. ಒಂದು ಕಡೆ ದೇವರ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ. ಭಕ್ತರ ಬೇಡಿಕೆ ಈಡೇರಿಸುವ ಶ್ರೀ ವೀರಭದ್ರೇಶ್ವರ ದೇವರಿಗೆ ಭಕ್ತ ಸಮೂಹ ಹರಕೆ. ಇನ್ನೊಂದೆಡೆ ಸೌಂದರ್ಯವನ್ನ ಮೈಗೂಡಿಸಿಕೊಂಡಿರೋ ಪ್ರಕೃತಿ ಸೊಬಗಿನಲ್ಲಿ ಜಾತ್ರೆಯ ಸಂಭ್ರಮ.

ಹೌದು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ ಗ್ರಾಮದ ಹೊರವಲಯದಲ್ಲಿ. ಸಾಸರವಾಡ, ಗದಗ ಜಿಲ್ಲೆಯ ಕೊನೆಯ ಹಳ್ಳಿ. ಜಿಲ್ಲೆಯ ಗಡಿಗೆ ಹೊಂದಿಕೊಂಡು ತುಂಗಭದ್ರಾ ನದಿ ಮೈದುಂಬಿ ಹರೆಯುತ್ತಿದೆ. ಅದರ ಜೊತೆಗೆ ನಡುಗಡ್ಡೆಯೊಂದನ್ನ ಸುತ್ತುವರೆದು ಹರಿದು ಹೊಸದೊಂದು ಪ್ರಪಂಚವನ್ನ ಸೃಷ್ಟಿಸಿಬಿಟ್ಟಿದೆ.

ಇದೇ ಜಾಗಕ್ಕೆ ಗಡ್ಡಿ ಶಂಕರಲಿಂಗ ಸನ್ನಿಧಿ. ಅಂದ ಹಾಗೆ ಇಂದು ಶಂಕರಿಂಗ ಗಡ್ಡಿ ಶಂಕರಲಿಂಗ ಮತ್ತು ವೀರಭದ್ರೇಶ್ವರ ದೇವರ ಜಾತ್ರೆ ಇತ್ತು ಅದ್ಧೂರಿಯಾಗಿ ನೆರವೇರಿತು. ವೀರಭದ್ರೇಶ್ವರ ದೇವಸ್ಥಾನದ ಮುಂದೆ ಅಗ್ನಿ ಕುಂಡ ಮಹೋತ್ಸವದಲ್ಲಿ ಪುರವಂತರು ಸೇರಿ ಭಕ್ತ ಸಮೂಹ ಅಗ್ನಿ ಕುಂಡದಲ್ಲಿ ಹಾಯ್ದು ಭಕ್ತಿಯ ಪರಾಕಷ್ಠೆ ಮೆರೆದರು. ಪುರವಂತರು, ಪಲ್ಲಕ್ಕಿ ಹೊತ್ತ ಭಕ್ತರು, ಭಕ್ತರು ಅಗ್ನಿಕುಂಡ ಹಾಯ್ದು ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗಿದ್ದರು. ಜೊತೆಗೆ ಶಸ್ತ್ರ ಹಾಕಿಕೊಂಡು ಭಕ್ತರು ಭಕ್ತಿಯ ಮಗ್ನತೆಯಲ್ಲಿ ಮುಳುಗಿದ್ದರು.

ಈ ನಡುಗಡ್ಡೆಗೆ 300 ವರ್ಷಗಳ ಇತಿಹಾಸ ಇದೆ. ಇಲ್ಲಿ ಸಹಸ್ರಾರು ಋಷಿಮುನಿಗಳು ವಾಸ ಮಾಡುತ್ತಿದ್ದರಂತೆ. ಹೀಗಾಗಿಯೇ ಈ ಗ್ರಾಮಕ್ಕೆ ಸಾಸರವಾಡ ಅನ್ನುವ ಹೆಸರು ಬಂತು ಎಂಬ ಪ್ರತೀತಿ ಇದೆ. ಇದೇ ಕಾಲದಲ್ಲಿ ಶಂಕರಲಿಂಗ ಮೂರ್ತಿಯೂ ಸಹ ಇಲ್ಲಿ ಉದ್ಭವವಾಗಿದೆ ಎಂದು ಭಕ್ತರು ಹೇಳುತ್ತಾರೆ. ಹೀಗಾಗಿ ಇಲ್ಲಿ ಪ್ರತಿ ವರ್ಷ ಜಾತ್ರೆಗೆ ಸಾವಿರಾರು ಜನ ಬಂದು ತಮ್ಮ ಭಕ್ತಿ ಸಮರ್ಪಿಸಿ ಹೋಗುತ್ತಾರೆ. ಋಷಿ ಮುನಿಗಳು ಪ್ರತಿಷ್ಠಾಪಿಸಿದ ವೀರಭದ್ರೇಶ್ವರ ಮೂರ್ತಿ ಇದೆ. ಭಕ್ತರ ಸರ್ವ ಬೇಡಿಕೆ ಈಡೇರಿಸುವ ವೀರಂಭದ್ರೇಶ್ವರ ಇಲ್ಲಿ ನೆಲೆಸಿದ್ದಾನೆ. ಮದುವೆಯಾಗದ ಯುವತಿಯರು ಮದುವೆ ಹರಕೆ ಹೊತ್ತರೆ, ಮಕ್ಕಳಾಗದ ಗೃಹಿಣಿಯರು ಮಕ್ಕಳ ಹರಕೆ ಹೊರುತ್ತಾರೆ. ಹೀಗೆ ಭಕ್ತರು ಬೇಡಿಕೊಂಡ ಹರಕೆ ಈಡೇರುತ್ತವೆ ಎನ್ನುವ ನಂಬಿಕೆಯಿಂದ ಗದಗ, ಹಾವೇರಿ, ವಿಜಯನಗರ ಜಿಲ್ಲೆ ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.

ನಡು ಗಡ್ಡೆಯಲ್ಲಿರುವ ಈ ಪವಿತ್ರವಾದ ಸ್ಥಳಕ್ಕೆ ತೆಪ್ಪ, ಎತ್ತಿನ ಬಂಡೆ, ಟ್ರ್ಯಾಕ್ಟರ್ ಮೂಲಕ ನಾನಾ ಭಾಗಳಿಂದ ಭಕ್ತರು ಆಗಮಿಸುತ್ತಾರೆ. ಮೈ ಜುಮ್ ಎನ್ನುವ ಹಾಗೆ ಶಸ್ತ್ರಗಳನ್ನು ಹಾಕಿಕೊಳ್ಳುತ್ತಾರೆ. ಸುಡು ಬಿಸಿಲಿನಲ್ಲಿ ಕೆಂಡವನ್ನು ಹಾಯ್ದು, ತಮ್ಮ ಭಕ್ತಿಯನ್ನು ಮೆರೆಯುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande