ಮಾದಕವಸ್ತು ಮುಕ್ತ ಜಿಲ್ಲೆಗಾಗಿ ಕ್ರಮ : ಗೋಪಾಲ ಬ್ಯಾಕೋಡ್
ಹುಬ್ಬಳ್ಳಿ, 09 ಮಾರ್ಚ್ (ಹಿ.ಸ.) : ಆ್ಯಂಕರ್ : ಧಾರವಾಡ ಜಿಲ್ಲೆಯನ್ನು ಮಾದಕವಸ್ತುಗಳಿಂದ ಮುಕ್ತವಾಗಿಸಲು ಕ್ರಮ ಕೈಗೊಂಡಿದ್ದು ಇದಕ್ಕೆ ಜಿಲ್ಲೆಯ ಜನತೆಯ ಸಹಕಾರ ಅಗತ್ಯ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಹೇಳಿದರು. ಜಿಲ್ಲೆಯನ್ನು ಡ್ರಗ್ಸ್ ಪ್ರೀ ಮಾಡಲು ತಮ್ಮೆಲ್ಲರ ಸ
Run


ಹುಬ್ಬಳ್ಳಿ, 09 ಮಾರ್ಚ್ (ಹಿ.ಸ.) :

ಆ್ಯಂಕರ್ : ಧಾರವಾಡ ಜಿಲ್ಲೆಯನ್ನು ಮಾದಕವಸ್ತುಗಳಿಂದ ಮುಕ್ತವಾಗಿಸಲು ಕ್ರಮ ಕೈಗೊಂಡಿದ್ದು ಇದಕ್ಕೆ ಜಿಲ್ಲೆಯ ಜನತೆಯ ಸಹಕಾರ ಅಗತ್ಯ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಹೇಳಿದರು.

ಜಿಲ್ಲೆಯನ್ನು ಡ್ರಗ್ಸ್ ಪ್ರೀ ಮಾಡಲು ತಮ್ಮೆಲ್ಲರ ಸಹಕಾರಬೇಕು. ಡ್ರಗ್ಸ್ ದಿಂದ ವಾಹನ ಅಪಘಾತ, ಕಳ್ಳತನ, ಹಲ್ಲೆ, ಕೊಲೆ ಅಂತಹ ಪ್ರಕರಣಗಳು ನಡೆಯುತ್ತವೆ. ಈ ಅಪರಾಧಗಳು ಒಂದಕ್ಕೊಂದು ಆಂತರಿಕ ಸಂಪರ್ಕಹೊಂದಿವೆ ಎಂದರು.

ಅವಳಿನಗರ ಸೇರಿ ಧಾರವಾಡ ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆ ಅಪಘಾತದಲ್ಲಿ ಸುಮಾರು 500 ಜನರ ಜೀವ ಹಾನಿ ಆಗುತ್ತಿದೆ. ಇದು ದೇಶದಲ್ಲಿ 1.50 ಲಕ್ಷದಷ್ಟಿದೆ. ಬಹುತೇಕ ಪ್ರಕರಣಗಳಿಗೆ ಮಧ್ಯ ಸೇವನೆ, ವೇಗದ ಚಾಲನೆ ಮತ್ತು ನಿರ್ಲಕ್ಷ್ಯದ ಚಾಲನೆ ಕಾರಣವಾಗಿವೆ. ಯುವಕರು ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿ ವಾಹನ ಚಾಲನೆ ಮಾಡಬೇಕು. ಯುವಕರ ಸಹಕಾರ ಮುಖ್ಯವಾಗಿದೆ. ಪಿಟ್ ನೇಸ್ ಪಾರ್ ಆಲ್ ಎಂಬ ತತ್ತ್ವದಡಿ ಪೊಲೀಸ್ ರನ್ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande