ಮಹಿಳಾ ಸಿಬ್ಬಂದಿಯಿಂದ ರೈಲು ನಿರ್ವಹಣೆ
ಬೆಂಗಳೂರು, 08 ಮಾರ್ಚ್ (ಹಿ.ಸ.) : ಆ್ಯಂಕರ್ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಇಂದು, ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ರೈಲು ಸಂಖ್ಯೆ 20624, ಕೆಎಸ್ಆರ್ ಬೆಂಗಳೂರು-ಮೈಸೂರು ಮಾಲ್ಗುಡಿ ಎಕ್ಸ್ಪ್ರೆಸ್ ಅನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದ ಓಡಿಸಲಾಯಿತು. ಈ ರೈಲಿನಲ್ಲಿ ಶ್ರೀಮ
Train


Train


ಬೆಂಗಳೂರು, 08 ಮಾರ್ಚ್ (ಹಿ.ಸ.) :

ಆ್ಯಂಕರ್ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಇಂದು, ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ರೈಲು ಸಂಖ್ಯೆ 20624, ಕೆಎಸ್ಆರ್ ಬೆಂಗಳೂರು-ಮೈಸೂರು ಮಾಲ್ಗುಡಿ ಎಕ್ಸ್ಪ್ರೆಸ್ ಅನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದ ಓಡಿಸಲಾಯಿತು. ಈ ರೈಲಿನಲ್ಲಿ ಶ್ರೀಮತಿ ಸಿರೀಷಾ ಗಜಿನಿ, ಲೋಕೋಪೈಲಟ್; ಶ್ರೀಮತಿ ಸುಕನ್ಯಾ.ಎಸ್, ಸಹಾಯಕ ಲೋಕೋ ಪೈಲಟ್; ಶ್ರೀಮತಿ ಪ್ರಿಯದರ್ಶಿನಿ, ರೈಲು ವ್ಯವಸ್ಥಾಪಕಿ (ಗಾರ್ಡ್); ಶ್ರೀಮತಿ ಸೋನಾ ವಿ.ಜೆ., ಟಿಕೆಟ್ ಪರೀಕ್ಷಕಿ; ಶ್ರೀಮತಿ ಸೌಮ್ಯ ಮತ್ತು ಶ್ರೀಮತಿ ಅಶ್ವತಿ ಚಂದ್ರನ್, ಆರ್ಪಿಎಫ್ ಎಸ್ಕಾರ್ಟಿಂಗ್ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದರು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಮಿತೇಶ್ ಕುಮಾರ್ ಸಿನ್ಹಾ ಅವರು ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದಲೇ ಈ ರೈಲನ್ನು ಚಲಾಯಿಸಲಾಗುತ್ತಿದ್ದು ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ರೈಲ್ವೆಯಲ್ಲಿ ಮಹಿಳೆಯರು ಹಳಿ ನಿರ್ವಹಣೆ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ರೀತಿಯ ಕಾರ್ಯಗಳನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸುತ್ತಿದ್ದಾರೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande