ಸ್ವಾಮೀಜಿಗಾಗಿ ಪರ ಹಾಗೂ ವಿರುದ್ಧ ಪ್ರತಿಭಟನೆ
ಗದಗ, 08 ಮಾರ್ಚ್ (ಹಿ.ಸ.) : ಆ್ಯಂಕರ್ : ಆ ಗ್ರಾಮದಲ್ಲಿ ಸ್ವಾಮೀಜಿಗಾಗಿ ಕದನ ಆರಂಭವಾಗಿದೆ. ಒಂದು ಸಮಾಜ ಸ್ವಾಮೀಜಿ ಬೇಡ ಎಂದರೆ ಇನ್ನೊಂದು ಸಮಾಜ ಸ್ವಾಮೀಜಿ ಬೇಕು ಎಂದು ಪಟ್ಟು ಹಿಡದಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂತಹ ಸ್ಥಿತಿ ಉಂಟಾಗಿದೆ. ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟಿದ್ದು,
ಫೋಟೋ


ಫೋಟೋ


ಫೋಟೋ


ಫೋಟೋ


ಗದಗ, 08 ಮಾರ್ಚ್ (ಹಿ.ಸ.) :

ಆ್ಯಂಕರ್ : ಆ ಗ್ರಾಮದಲ್ಲಿ ಸ್ವಾಮೀಜಿಗಾಗಿ ಕದನ ಆರಂಭವಾಗಿದೆ. ಒಂದು ಸಮಾಜ ಸ್ವಾಮೀಜಿ ಬೇಡ ಎಂದರೆ ಇನ್ನೊಂದು ಸಮಾಜ ಸ್ವಾಮೀಜಿ ಬೇಕು ಎಂದು ಪಟ್ಟು ಹಿಡದಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂತಹ ಸ್ಥಿತಿ ಉಂಟಾಗಿದೆ. ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗ್ರಾಮ ಆದರಹಳ್ಳಿ . ಆದರಹಳ್ಳಿ ಗ್ರಾಮದ ಐತಿಹಾಸಿಕ ಗವಿಮಠಕ್ಕೆ ಸ್ವಾಮೀಜಿಯನ್ನು ನೇಮಕ ಮಾಡಲಾಗಿತ್ತು.. ಆದರೆ ಈ ಸ್ವಾಮೀಜಿ ಗವಿಮಠದ ಸುತ್ತಲೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಾರೆ ಎಂದು ಭೋವಿ ಸಮಾಜದದ ವಿರುದ್ಧ ಪೊಲೀಸರಿಗೆ ದೂರು ನೀಡಿ ಬಂಧಿಸಿದ್ದರಂತೆ. ಹೀಗಾಗಿ ಅವರ ಅಕ್ರಮ ಬಯಲು ಮಾಡಿದಕ್ಕೆ ನನ್ನನ್ನು ಮಠದಿಂದ ಹೊರಕ್ಕೆ ಕಳಿಸಿದ್ದಾರೆ ಎಂದು ಆರೋಪ‌ ಮಾಡಿದ್ದಾರೆ. ಇನ್ನೂ ಸ್ಥಳೀಯ ರಾಜಕೀಯ ನಾಯಕನ ಕೈವಾಡದಿಂದ ನಮ್ಮನ್ನು ಮಠದಿಂದ ಓಡಿಸಲು ಯತ್ನಿಸಲಾಗಿದೆ. ಹೀಗಾಗಿ ನ್ಯಾಯ ಸಿಗುವವರಿಗೆ ನಾನು ಸೇವಾಲಾಲ್ ಮಂದಿರದಲ್ಲಿ ಧರಣಿ ಮಾಡುತ್ತೇನೆ, ಸಲ್ಲೇಖನ ವೃತ್ತ ಆರಂಭ ಮಾಡಿದ್ದೇನೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಸ್ವಾಮೀಜಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮವನ್ನು ಬಯಲು ಮಾಡಿದ್ದಾರೆ. ಕಲ್ಲು ಗಣಿಗಾರಿಕೆ, ಮರಳು ದಂಧೆ ಮಾಡುವವರ ವಿರುದ್ಧ ಹೋರಾಟ ಮಾಡಿದ್ದರು. ಹೀಗಾಗಿ ಸ್ವಾಮೀಜಿ ಮೇಲೆ ವಿನಾಕಾರಣ ಒಂದು ಸಮುದಾಯದವರು ಆರೋಪ ಮಾಡುತ್ತಿದ್ದಾರೆ. ಏನಾದರೂ ಸಮಸ್ಯೆಯಾದರೂ ಸ್ವಾಮೀಜಿ ಮುಂದೆ ಬರುತ್ತಿದ್ದರು, ರಾಜಕಾರಣಿಗಳು ಕೈವಾಡದಿಂದ ಹೀಗೆ ಮಾಡುತ್ತಿದ್ದಾರೆ. ಮಠದಿಂದ ಸ್ವಾಮೀಜಿ ಹೊರಕ್ಕೆ ಹಾಕಿ, ಅವರ ಕೊಠಡಿಗೆ ಬೀಗ್ ಹಾಕಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀ ಕುಮಾರ್ ಮಹಾರಾಜ ಸ್ವಾಮೀಜಿಯನ್ನು ಗವಿಮಠಕ್ಕೆ ನಾವೇ ಕರೆದುಕೊಂಡು ಬಂದಿದ್ದೇವೆ. ಆಗ ಬಂಜಾರ ಸಮಾಜ ವಿರೋಧ ಮಾಡಿತ್ತು. ಆದರು ಸ್ವಾಮೀಜಿ ಇರಲಿ ಎಂದು ಕರೆದುಕೊಂಡು ಬಂದು ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದೇವೆ. ಅದರ ಲೆಕ್ಕ ಕೂಡಾ ಇಲ್ಲ. ಸ್ವಾಮೀಜಿ ಮಠವನ್ನು ಉದ್ಧಾರ ಮಾಡೋದನ್ನು ಬಿಟ್ಟು ನಮ್ಮವರ ಮೇಲೆ ದೂರು ನೀಡಿ ಕಿರುಕುಳ ನೀಡುತ್ತಿದ್ದಾರೆ. ನಾವು ನೂರಾರು ವರ್ಷಗಳಿಂದ ಕಲ್ಲು ಒಡೆದು ಜೀವನ ಮಾಡುತ್ತಿದ್ದೇವೆ, ಈವಾಗ ನಮ್ಮ ಕುಲ ಕಸಬು ಮಾಡಿದರೆ ಅಕ್ರಮ ಕಲ್ಲುಗಣಿಗಾರಿಕೆ ಎಂದು ದೂರು ನೀಡುತ್ತಿದ್ದಾರೆ. ಹಾಗೇ ಗ್ರಾಮದಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಮಗೆ ಈ ಸ್ವಾಮೀಜಿ ಬೇಡ, ಹೀಗಾಗಿ ಅವರ ಕೊಠಡಿಗೆ ಬೀಗ ಹಾಕಿದ್ದೇವೆ ಎಂದು ದೂರುತ್ತಾರೆ.

ಸ್ವಾಮೀಜಿಗಾಗಿ ಎರಡು ಸಮಾಜದ ನಡುವೆ ವೈಮನಸ್ಸು ಆರಂಭವಾಗಿದೆ. ಸ್ವಾಮೀಜಿ ನ್ಯಾಯ ಸಿಗುವವರಿಗೆ ಉಪವಾಸ ಆರಂಭ ಮಾಡಿದ್ದಾರೆ. ಪರ ಹಾಗೂ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande