ಕೋಲಾರ, ೦೮ ಮಾಚ್ (ಹಿ.ಸ) :
ಆ್ಯಂಕರ್ : ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಿದರೆ ಜನತೆಗೆ ಅನುಕೂಲವಾಗುತ್ತದೆ. ಇದಕ್ಕೆ ದೇಶದ ವಿವಿಧ ರಾಜ್ಯಗಳಲ್ಲಿ ಉದಾಹರಣೆಗಳಿವೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬಜೆಟ್ ಮಂಡನೆಯಾದರೆ ಕೋಲಾರ ಮಯಾ ಅಂತ ಮಾತುಗಳು ಬರುತ್ತಿದ್ದವು. ಆದರೆ ಸಿದ್ದರಾಮಯ್ಯ ಅವರು ಜಿಲ್ಲೆಗೆ ಹೆಚ್ಚು ಆಧ್ಯತೆ ನೀಡಿ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.
ಕೆಜಿಎಫ್‌ನಲ್ಲಿ ಆಧುನಿಕ ಮಾರುಕಟ್ಟೆ ನಿರ್ಮಾಣ, ಭಾರತೀಯ ಮೀಸಲು ಪೊಲೀಸ್ ಪಡೆಗಳನ್ನು ಸ್ಥಾಪಿಸಲು ೪೦ ಕೋಟಿ ರೂ. ಮೀಸಲು ಹೀಗೆ ಹಲವು ಕಾರ್ಯಕ್ರಮ ನೀಡಿದ್ದಾರೆ. ಬಹುದಿನಗಳ ಬೇಡಿಕೆಯಾಗಿರುವ ಕೋಲಾರ ನಗರವನ್ನು ಮಹಾ ನಗರ ಪಾಲಿಕೆ ಬಜೆಟ್‌ನಲ್ಲಿ ಘೋಷಣೆ ಆಗಬೇಕು ಅಂತೆನಿಲ್ಲ. ಇದಕ್ಕೆ ಈಗಾಗಲೇ ಪ್ರಯತ್ನ ಮಾಡಿದ್ದು ಸರ್ಕಾರ ಅನುಮತಿ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.
ಎಪಿಎಂಸಿ ಮಾರುಕಟ್ಟೆಗೆ ೧೦೦ ಎಕರೆ ಜಾಗ ಕೇಳಿರುವ ಹಿನ್ನಲೆಯಲ್ಲಿ ತಡವಾಗುತ್ತಿದ್ದು, ಇದಕ್ಕಾಗಿ ತಾಲೂಕಿನ ಕೋರಗೊಂಡಹಳ್ಳಿ, ಕೊನೆಪುರ, ಆನೆಪುರ ಸಮೀಪ ನೂರು ಎಕರೆ ಜಾಗ ಗುರುತಿಸಿದ್ದು, ಆದಷ್ಟು ಬೇಗ ಸರ್ಕಾರದಿಂದ ಮಂಜೂರಾತಿ ಪಡೆದು ಮಾರುಕಟ್ಟೆ ನಿಮಾರ್ಣಕ್ಕೆ ಕ್ರಮವಹಿಸಲಾಗುವುದು. ಸದ್ಯ ಇರುವ ಮಾರುಕಟ್ಟೆಯನ್ನು ತರಕಾರಿ, ಹೂವು ಮಾರುಕಟ್ಟೆಗೆ ಉಪಯೋಗಿಸಲಾಗುವುದು ಎಂದರು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಒಂದು ಒಳ್ಳೆ ಕೆಲಸ ಮಾಡಿದಾಗ ಅದಕ್ಕೆ ಬೆಂಬಲ ನೀಡಬೇಕು. ಒಂದು ವೇಳೆ ಜನಕ್ಕೆ ತೊಂದರೆ ಅಗುತ್ತದೆ ಎಂದರೆ ನಮಗೂ ತೊಂದರೆನೆ. ಅದಕ್ಕಾಗಿಯೇ ಅನ್ಯಾಯವಾಗದಂತೆ ಜಿಲ್ಲೆಗೆ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ಹಿಂದೆ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣ ಘೋಷಣೆ ಮಾಡಿದರು ಹೋದರು. ಅದಕ್ಕೆ ಹಣ ಕೊಟ್ಟಿದ್ದು ಸಿದ್ದರಾಮಯ್ಯ ಸರ್ಕಾರ. ಎತ್ತಿನಹೊಳೆ ಯೋಜನೆಯಿಂದ ಬೇರೆ ಜಿಲ್ಲೆಗಳಿಗೆ ನೀರು ಹರಿಸಿದ್ದನ್ನು ವಿರೋಧ ವ್ಯಕ್ತಪಡಿಸುತ್ತೆವೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾದವ ಸ್ವಾಮಿ ಅವರು ಯೋಜನೆ ದಿಕ್ಕು ತಪ್ಪಿಸಿ ಕೆರೆಗಳಿಗೆ ನೀರು ಹರಿಸಿಕೊಂಡರು. ಈಗಾಗಲೇ ಈ ಬಗ್ಗೆ ಸಿಎಂ, ಡಿಸಿಎಂ ಅವರ ಬಳಿ ಚರ್ಚಿಸಲಾಗಿದ್ದು ಇದೇ ವರ್ಷದಲ್ಲಿ ಕೆಲಸ ಪೂರ್ಣಗೊಳಿಸಿ ಜಿಲ್ಲೆಗೆ ಕುಡಿಯುವ ನೀರು ಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.
ಚಿತ್ರ : ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್